ಮುದ್ದೇಬಿಹಾಳ :ಪಟ್ಟಣದಲ್ಲಿ ನಡೆಯುತ್ತಿರುವ 24×7 ಕುಡಿಯುವ ನೀರಿನ ಯೋಜನೆ ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಈ ಕಾಮಗಾರಿಯನ್ನು ಸಂಪೂರ್ಣ ಕಳಪೆ ಮಟ್ಟದಲ್ಲಿ ಮಾಡುವ ಮೂಲಕ ಹಳ್ಳ ಹಿಡಿಸುತ್ತಿದ್ದಾರೆಂದು ಮಾಜಿ ಶಾಸಕ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್ ಪಾಟೀಲ ನಡಹಳ್ಳಿ ಶಾಸಕ ಅಪ್ಪಾಜಿ ನಾಡಗೌಡ ವಿರುದ್ಧ ಆರೋಪ ಮಾಡಿದರು.
ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಪುರಸ್ಕೃತ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಶೇ 50% ಅನುದಾನ ನೀಡಿದರೆ ರಾಜ್ಯ ಸರಕಾರ ಶೇ ೩೫% ನೀಡಬೇಕು ಪುರಸಭೆ 15% ಅನುದಾನ ತುಂಬಬೇಕು ಆದರೆ ಇಲ್ಲಿ ರಾಜ್ಯ ಸರಕಾರ ನಯಾ ಪೈಸೆ ಹಾಕದೆ ಕೇಂದ್ರ ಸರಕಾರ ನೀಡಿರುವ ಶೇ 50% ಅನುದಾನದಲ್ಲಿ ಕಾಮಗಾರಿ ಮುಗಿಸುವ ಹುನ್ನಾರ ನಡೆಸಿದೆ
ಶಾಸಕ ಅಪ್ಪಾಜಿ ನಾಡಗೌಡರು ಈ ಯೋಜನೆಯನ್ನು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ ಎಂದು ಪ್ರಧಾನಿ ಮೋದಿಯವರ ಹೆಸರು ಹೇಳಲಿಲ್ಲಾ ಈ ಯೋಜನೆ ನನ್ನ ಅವಧಿಯಲ್ಲಿ ಮಾಡಿದ್ದು ಈಗ ಈ ಯೋಜನೆಯ ಟೆಂಡರ್ ಶಾಸಕರ ಅಳಿಯ ಪಡೆದರೆ ಕೆಲಸವನ್ನು ಸುರೇಶ ನಾಡಗೌಡ ಮಾಡುತ್ತಿದ್ದಾರೆ ಎಂದರು.
ಪಟ್ಟಣದಲ್ಲಿ ಗುಣಮಟ್ಟದ ಸಿಸಿ ರಸ್ತೆಗಳನ್ನು ಮಾಡಲಾಗಿದೆ ಈ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಿಸಿ ರಸ್ತೆ ಹಾಳು ಮಾಡದೆ ರಸ್ತೆಯ ಎರಡು ಬದಿ ಪೈಪ್ ಹಾಕಲು ಅವಕಾಶ ಇದೆ ಮತ್ತು ಒಳಚರಂಡಿ ನೀರು ಮಿಕ್ಸ್ ಆಗದಂತೆ ಪುಡ್ ಗ್ರೇಡ್ ಪೈಪ್ ಬಳಕೆ ಮಾಡಬೇಕು ಜನರಿಗೆ ಪುಕ್ಸಟ್ಟೆ ನೀರು ನೀಡುತ್ತಿಲ್ಲಾ ಮೀಟರ್ ಕೂಡಿಸಿ ಜನರಿಂದ ಹಣ ಪಡೆಯುತ್ತಿರ ಯಾವುದೇ ಕಾರಣಕ್ಕೂ ಬಿಜೆಪಿ ಪುರಸಭೆ ಸದಸ್ಯರು ಸಿಸಿ ರಸ್ತೆ ಅಗೆಯಲು ಅವಕಾಶ ನೀಡಬಾರದು ಮತ್ತು ಸಾರ್ವಜನಿಕರು ಎಚ್ಚೆತ್ತುಕೂಳ್ಳಿ ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ ಚರಂಡಿ ಮಿಕ್ಸ್ ನೀರು ಕುಡಿಯಲು ಕೋಡ್ತಾರೆ ನೀವು ಹಣಕೊಟ್ಟು ಚರಂಡಿ ನೀರು ಕುಡಿಯಬೇಡಿ ಎಂದರು.
ಪಟ್ಟಣದಲ್ಲಿಯ ಒಳಚರಂಡಿ ಕಾಮಗಾರಿ ಸಹ ಸಂಪೂರ್ಣ ಕಳಪೆ ಮಟ್ಟದಲ್ಲಿ ಆಗಿದೆ ಎಸ್ಟಿಮೆಟ್ ಪ್ರಕಾರ ಇರಬೇಕಾದ ಒಳಚರಂಡಿ ಚೇಂಬರ್ ನಲ್ಲಿ 2 ಸಾವಿರ ಚೆಂಬರ್ ಕಡಿಮೆ ಇವೆ ,ಪಟ್ಟಣದ ಸ್ಲಂಬೋರ್ಡ ಮನೆ ಹಂಚಿಕೆ ಮಾಡಿಲ್ಲವೆಂದು ಆರೋಪಿಸಿದರು.
ಈ ವೇಳೆ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ,ಸದಾಶಿವ ಮಾಗಿ, ಸಂಗಮ್ಮ ದೇವರಳ್ಳಿ ಬಸವರಾಜ ಮುರಾಳ, ಗುಂಡಪ್ಪ ತಟ್ಟಿ, ಬಿಜೆಪಿ ಪಕ್ಷದ ಜಗದೀಶ ಪಂಪಣ್ಣನವರ,ಸಂಜಯ ಬಾಗೇವಾಡಿ, ಸಂಗಮೇಶ ನಾಗೂರ,ನಾಗೇಶ ಕವಡಿಮಟ್ಟಿ ,ವಿಜಯಕುಮಾರ್ ಬಡಿಗೇರ, ಗೌರಮ್ಮ ಹುನಗುಂದ, ನರಸಮ್ಮ ಗುಬಚಿ , ಅಪ್ಪು ದನ್ನೂರ ಇತರರು ಉಪಸ್ಥಿತರಿದ್ದರು.
ನಡಹಳ್ಳಿ ಆರೋಪ : ಹುಡ್ಕೂ ಬಡಾವಣೆ ಆಲಮಟ್ಟಿ ಬೈಪಾಸ್ ರಸ್ತೆ 18 ಮಿಟರ್ ಇದ್ದದ್ದನ್ನು 12 ಮಿಟರ್ ಮಾಡಿಸುವ ಮೂಲಕ ಒತ್ತುವರಿ ಮಾಡಿಸಿದ್ದಾರೆ ೨ ಸೈಟ್ ಶಾಸಕರ ಸಂಬಂಧಿಕರರಿಗೆ ನೀಡುವ ಮೂಲಕ ದಾಖಲೆ ಕೇಳಿದರೆ ನೀಡುತ್ತೇನೆ ಈ ಕುಡಿಯುವ ನೀರಿನ ಯೋಜನೆಯಲ್ಲಿ ದುಡ್ಡು ಹೊಡೆಯಲಾಗುತ್ತಿದೆ ಅದರಲ್ಲಿ ಶಾಸಕರಿಗೆ ಸಹ ಪಾಲು ಹೋಗುತ್ತದೆ;
© 2025 VOJNews - Powered By Kalahamsa Infotech Private Limited.