ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಕ್ಕಳ ಸಂತೆ..! ವಾವ್ ಎನ್ನುವಂತೆ, ಇಂಡಿಯ ಯಾವ ಶಾಲೆ ಗೊತ್ತಾ..?
ಇಂಡಿ:– ಗ್ರಾಮೀಣಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯವರು ಇಂದು ಆಯೋಚಿಸಿರುವ ಈ ಮಕ್ಕಳ ಸಂತೆ (ಮೆಟ್ರಿಕ್‌ಮೇಳೆ) ಮಕ್ಕಳಲ್ಲಿ ದೈನಂದಿನ ವ್ಯವಹಾರಿಕ ಜ್ಞಾನ ಬೆಳೆಸುವಂತೆ ನಿಜವಾಗಲು ಶಾಲಾ ಆವರಣ ಮಕ್ಕಳ ಸಂತೆಯಾಗಿ ಪರಿವರ್ತನೆಯಾಗಿತ್ತು. ಮಕ್ಕಳಿಗೆÀ ಉತ್ಕೃಷ್ಟ ಶಿಕ್ಷಣ ಪಠ್ಯ, ಸಹ ಪಠ್ಯದೊಂದಿಗೆ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಟಿ.ಎಸ್.ಅ¯ಗೂರು ಅವರು ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿರುವ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ೨೧ನೇ ಹಾಗೂ ೨೦೨೪-೨೫ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನÀ ಹಾಗೂ ಮಕ್ಕಳ ಸಂತೆ (ಮಟ್ರಿಕ್ ಮೇಳೆ) ಉದ್ಘಾಟಸಿ ಮಾತನಾಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಉತ್ತಮ ಗುಣಮಟ್ಡದ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಕ್ಕಳ ವ್ಯಹಾರಿಕ ಜ್ಞಾನ ಬೆಳೆಸುವುದು ಅತ್ಯಅವಶ್ಯಕ, ನಿಜವಾಗಲು ಶಾಲೆಯ ಅವರಣ ಮಕ್ಕಳ ಸಂತೆಯಾಗಿ ಪರಿವರ್ತನೆಯಾಗಿತ್ತು.
೧೧೫ ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಉಪಹಾರ, ಊಟ, ಸಿಹಿತಿನಿಸುಗಳು, ಪಾನಿಪುರಿ, ವಡಾಪಾವ, ಜ್ಯೂಸ್, ಎಳೆನೀರು, ಬಳೆ, ಬಟ್ಟೆ, ಬುಕ್ ಸ್ಟಾಲ್, ಹೀಗೆ ವಿವಿಧ ಬಗೆಯ ವಸ್ತುಗಳನ್ನು ಮಾರಟ ಮಾಡುತ್ತಿರುವುದನ್ನು ಕಂಡು ತುಂಬ ಸಂತೋಷವಾಯಿತು. ಇದು ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲೊAದಾಗಿದೆ. ಜಿಲ್ಲೆ ರಾಜ್ಯದಲ್ಲಿ ಇನ್ನಷ್ಟು ಹೆಸರು ಮಾಡಲಿ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿನಿ ಶ್ರೀಮತಿ ಕರೀಷ್ಮಾ ಶೇಖ್ ಅವರು ಪಿ ಎಸ್ ಐ ಆಗಿರುವುದು ಈ ಸಂಸ್ಥೆಯ ಗುಣಮಟ್ಟವನ್ನು ತಿಳಿಸುತ್ತದೆ. ತಾಲೂಕು ಜಿಲ್ಲಾ ಮಟ್ಟದ ವಿವಿಧ ಶೈಕ್ಷಣ ಕ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಬಲವಾದ ಸ್ವರ್ಥೆ ನೀಡುತ್ತಿರುವುದು ಸಂತಸವಾಗಿದೆ ಎಂದರು.
ಜಿ.ಒ.ಸಿ.ಸಿ. ನೂತನ ನಿರ್ದೇಶಕರಾದ ಶ್ರೀ ಅರ್ಜುನ ಲಮಾಣ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ಒಳ್ಳೆಯ ಗುಣಮಟ್ಟದ ಸಂಸ್ಥೆ ಕಟ್ಟುವುದು ಕಷ್ಟ ಸಾಧ್ಯ ಆದರೆ ಕಲ್ಮನಿ ಸಹೋದರರ ಶ್ರಮದಿಂದ ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ.
ವಿದ್ಯಾರ್ಥಿಗಳು ವ್ಯವಹಾರಿಕ ಜ್ಞಾನಗಳಿಸಲು ಮಕ್ಕಳ ಸಂತೆ ಆಯೋಜಿರುವುದು ಶ್ಲಾಘನೀಯ ಎಂದರು.
ಉಪನ್ಯಾಸಕರಾಗಿ ಆಗಿಮಿಸಿದ್ದ ಗೆಜ್ಜೆ ಕೆರಿಯರ್ ಅಕಾಡೆಮಿಯ ಸುರೇಶ ಗೆಜ್ಜಿಯವರು ಮಾತನಾಡಿ ಪಾಲಕರು ಮತ್ತು ಶಿಕ್ಷಕರು ಇಂದು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ನೂಲಿನಂತೆ ಸೀರೆ, ತಾಯಿಯಂತೆ ಮಗಳು ತಾಯಿಯೆ ಮೊದಲ ಗುರು ಎಂಬAತೆ ಪಾಲಕರು ತಮ್ಮ ಮಕ್ಕಳು ಏನು ಮಾಡುತ್ತಿವುವರು ಎಂಬುವುದನ್ನು ಗಮನಿಸಬೇಕು, ಮಕ್ಕಳು ಮಾಡುವ ತಪ್ಪುಗಳನ್ನು ಚಿಕ್ಕವರಿದ್ದಾಗಲೇ ತಿದ್ದಿ ಬುದ್ದಿವಾದ ಹೇಳಿದರೆ ಸಂಸ್ಕಾರವAತರಾಗುತ್ತಾರೆ ಗ್ರಾಮೀಣ ಭಾಗದಲ್ಲಿ ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಕಾರಯುಕ್ತ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಲ್ಮನಿ ಸಹೋದರರ ಹಾಗೂ ಶಿಕ್ಷಕರ ಕಾರ್ಯ ಅನನ್ಯ ಈ ಸಂಸ್ಥೆ ರಾಜ್ಯಮಟ್ಟದಲ್ಲಿ ರಾಷ್ಟಿçÃಯ ಮಟ್ಟದಲ್ಲಿ ಹೆಸರು ಗಳಿಸಲೆಂದು ಶುಭ ಹಾರೈಸಿದರು.
ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಬೆಂಗಳೂರಿನ ಪುಲಿಕೇಶಿನಗರ ಪೋಲಿಸ್ ಠಾuಯ ಪಿ ಎಸ್ ಐ ಆಗಿರುವ ಶ್ರೀಮತಿ ಕರಿಷ್ಮಾ ಶೇಖ್ ಅವರು ಮಾತನಾಡಿ ನಾನು ಈ ಶಾಲೆಯಲ್ಲಿ ಗಳಿಸಿದ ಜ್ಞಾನ ಅಪಾರವಾದದ್ದು. ಪ್ರತಿ ಶನಿವಾರದಂದು ನಡೆಸುತ್ತಿರುವ ರಸಪ್ರಶ್ನೆ ಕಾರ್ಯಕ್ರಮವು ನನಗೆ ಪಿ ಎಸ್ ಐ ಪರೀಕ್ಷೆ ಪಾಸಾಗಲೂ ತುಂಬಾ ಸಹಾಯವಾಗಿದೆ. ಹಾಗೂ ಇಲ್ಲಿ ಕಲಿತ ಶಿಕ್ಷಣವೇ ನನಗೆ ದಾರಿದೀಪವಾಗಿದೆ, ಪಾಲಕರಾದ ತಾವುಗಳು ಮಕ್ಕಳಿಗೆ ಮೊಬೈಲ್‌ಗಳನ್ನು ಕೊಡದೇ ಅಭ್ಯಾಸದ ಕಡೆಗೆ ಹೆಚ್ಚು ಗಮನಹರಿಸುವಂತೆ ನೋಡಿಕೊಳ್ಳಬೇಕು. ನಾನು ವಿ.ಜಿ ಸರ್, ಪಿ.ಜಿ ಸರ್ ಹಾಗೂ ಎಲ್ಲಾ ಗುರು-ಗುರುಮಾತೆಯರಿಗೆ ಋಣ ಯಾಗಿರುವೆ ಎಂದರು.
ಇಂಡಿ ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಎ.ರಾವುರ ಅವರು ಮಾತನಾಡಿ, ನಾನು ೨೦೦೬ ರಲ್ಲಿ ಈ ಗ್ರಾಮದ ಗ್ರಾಮಲೆಕ್ಕಾಧಿಕಾರಿಯಾಗಿದಾಗಿನಿಂದ ಕಲ್ಮನಿ ಸೋಹದರರು ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಶ್ರಮಿಸಿದ್ದು, ಅವರು ಸದಾ ಶ್ರಮಜೀವಿಗಳು ಸದಾ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುವರು ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಜಿ.ಕಲ್ಮನಿಯವರು ಅಧ್ಯಕ್ಷತೆಯನ್ನು ವಹಿಸಿ ಪಾಲಕರ ಹಾಗೂ ಗ್ರಾಮಸ್ಥರ ಸಹಕಾರ ಸದಾ ಇರಲೆಂದು ಹೇಳಿದರು. ಸಾನಿದ್ಯವನ್ನು ಸುಕ್ಷೇತ್ರ ಗೋಳಸಾರದ ಶ್ರೀ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು ಹಾಗೂ ಗ್ರಾಮದ ವೇ|| ಶ್ರೀದಯಾನಂದ ಹಿರೇಮಠ ಪೂಜ್ಯರು ವಹಿಸಿಕೊಂಡು ಆಶಿರ್ವೋಚನ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಒ.ಸಿ.ಸಿ. ಬ್ಯಾಂಕಿನ ಮತ್ತು ಎನ್.ಜಿ.ಒ ನೂತನ ನಿರ್ದೇಶಕರಾದ ಅರ್ಜುನ ಲಮಾಣ , ಅಲ್ಲಾಭಕ್ಷ ವಾಲಿಕಾರ, ಹಣಮಂತ ಕೊಣದಿ, ಅಶೋಕ ಚನಬಸಗೋಳ, ವೈ.ಟಿ.ಪಾಟೀಲ, ಎಸ್.ವಿ.ಹರಳಯ್ಯ, ರವಿ ಗಿಣ ್ಣ, ಅಬುತಲಿಂ ಹೊಸೂರು, ಮಲಕು ಹರಿಜನ, ಅವರನ್ನು ಸನ್ಮಾನಿಸಲಾಯಿತು. ಸಯಾಂಕಾಲ ವಿದ್ಯಾರ್ಥಿಗಳಿಂದ ಭರತನಾಟ್ಯ, ಯಕ್ಷಗಾನ, ಜಾನಪದ ನೃತ್ಯ, ಕೋಲಾಟ, ನಾಟಕ, ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಶ್ರೀ ಹಣಮಂತ ಖಂಡೇಕರ ಅವರು ಮಾತನಾಡಿ ಈ ಭಾಗದ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವಲ್ಲಿ ಈ ಸಂಸ್ಥೆಯ ಕೊಡುಗೆ ಅಮೂಲ್ಯವಾದದ್ದು ಎಂದರು. ಪೂಜ್ಯರಾದ ಶ್ರೀ ಹಣಮಂತಮಹಾರಾಯ ಕಲ್ಮನಿಯವರು,
ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಶ್ರೀದೇವಿ ಕಲ್ಮನಿ ಹಾಗೂ ಪಿ.ಎಸ್.ಐ ಶ್ರೀಮತಿ ಕರಿಷ್ಮಾ ಶೇಖ್, ನಿಜಣ್ಣ ಕಾಳೆ, ಎಚ್.ಕೆ. ಮಾಳಗೊಂಡ ರಮೇಶ ಬಗಲೂರ. ಶಂಕರಗೌಡ ಬಿರಾದಾರ, ಶ್ರೀ ಬೀಮರಾಂiÀi ರಾ.ಮೇತ್ರಿ, ಅಂದಪ್ಪ ಹಂದ್ರಾಳ, ಗುರಣ್ಣ ಪವಾಡಿ, ಕಾಶಿನಾಥ ತೆಲಸಂಗ, ಸೋಮು ಕುಂಬಾರ, ಶೈಲಜಾ ಜಾದವ, ನಿರ್ಮಲಾ ತಳಕೇರಿ, ದೊಡ್ಡಪ್ಪ ಪೂಜಾರಿ, ಬಸವರಾಜ ಅರ್ಜುಣಗಿ, ಮಾಯಪ್ಪ ಪರಗೊಂಡ, ನಿಂಗಪ್ಪ ತಾಂಬೆ, ನಿಲಪ್ಪ ಕರಜಗಿ, ಡಿ.ಆರ್.ಕೋರೆ, ಎ.ಎಚ್.ಹೊಸಮನಿ, ಎಮ್.ಎ.ಲಕಡಾರ, ಎಸ್.ಎಸ್.ಕಾಂಬಳೆ, ಟಿ.ಕೆ. ಪೂಜಾರಿ, ರಾಘವೇಂದ್ರ ಬಡಿಗೇರ ಉಪಸ್ಥಿತರಿದ್ದರು. ವರದಿಯನ್ನು ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಶಾಲೆಯ ಶ್ರೀ ಜಾನ್ ಗುರುಗಳು ಮಂಡಿಸಿದರು. ಸಂಸ್ಥೆಯ ಗುರುಗಳು ಗುರುಮಾತೆಯರು, ಸಿಬ್ಬಂದಿ ಹಾಗೂ ಪಾಲಕರು, ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಸಂಸ್ಥಾಪಕರಾದ ಶ್ರೀ ಪಿ.ಜಿ.ಕಲ್ಮನಿ ಅವರು ನಿರೂಪಿಸಿ ಶಿವಾನಂದ ಕಲ್ಮನಿ ವಂದಿಸಿದರು.