ಜಿ.ಎಸ್.ಕುಲಕರ್ಣಿ ಶಾಂತೇಶ್ವರ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣ
ಇಂಡಿ: ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಮತ್ತು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳ ಜೀವನಕ್ಕೆ ಆಧಾರ ಕಲ್ಪಿಸುವ ವೃತ್ತಿಪರ ಕೋರ್ಸಗಳನ್ನು ಪ್ರಾರಂಭಿಸಲು ಹೊಸ ಕ್ರಿಯಾ ಯೋಜನೆಯನ್ನು ರೂಪಿಸುವದಾಗಿ ಸಂಸ್ಥೆಯ ನೂತನ ಅಧ್ಯಕ್ಷ ಜಿ.ಎಸ್. ಕುಲಕರ್ಣಿ ವಕೀಲರು ಹೇಳಿದರು.
ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾ ವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಖ್ಯಾತ ವಕೀಲರಾದ ಜಿ. ಎಸ್. ಕುಲಕರ್ಣಿಯವರು ಅಧಿಕಾರ ಪದಗ್ರಹಣ ಮಾಡಿ ಮಾತನಾಡಿದರು.
ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಗೌ.ಕಾರ್ಯದರ್ಶಿ ಪ್ರಭಾಕರ ಬಗಲಿ, ಖಜಾಂಚಿ ಸಿದ್ದಣ ತಾಂಬೆ, ಸದಸ್ಯರಾದ ಭೀಮನಗೌಡ ಪಾಟೀಲ, ಸಾತಪ್ಪ ತೆನಿಹಳ್ಳಿ, ವರ್ಧನ ದೋಶಿ ಉಪಸ್ಥಿತರಿದ್ದರು.
ಸಭೆಯಲ್ಲಿ ಶಾಂತಗೌಡ ಬಿರಾದಾರ, ರಾಜುಗೌಡ ಬಿರಾದಾರ, ಪ್ರದೀಪ ದೋಶಿ, ರವಿಗೌಡ ಪಾಟೀಲ, ಹಾಗು ಸಂಸ್ಥೆಯಡಿಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.