ಕಾಂಗ್ರೆಸ್ ವಿರುದ್ಧ ನಿಲ್ಲದ ಆಕ್ರೋಶ..!
ವಿಜಯಪುರ : ತಳವಾರ ಸಮಾಜದ ಮುಖಂಡ ಸಣ್ಣಪ್ಪ ತಳವಾರ ಅವರಿಗೆ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಹುದ್ದೆ ನೀಡಿ, ವಾರದಲ್ಲಿಯೇ ಏಕಾಏಕಿಯಾಗಿ ಹುದ್ದೆಯಿಂದ ತೆಗಿದಿದ್ದು ತಳವಾರ ಸಮುದಾಯಕ್ಕೆ ಅತ್ಯಂತ ನೋವಾಗಿದೆ ಎಂದು ವಿಜಯಪುರ ನಗರದ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ವಿಜಯಪುರ ನಗರದ ಅಧ್ಯಕ್ಷ ಶ್ರೀ ಅಮೋಘ. ತಳವಾರ, (ಲೋಗಾವಿ )ಮುಖಂಡ ಹಾಗೂ ಕಾಂಗ್ರೇಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷದಲ್ಲಿ ಪಕ್ಷದ ಕಟ್ಟ ಕಾರ್ಯಕರ್ತರಾಗಿ ಹಗಲು-ಇರಳು ಶ್ರಮಿಸಿರುವ ಹಾಗೂ ತಳವಾರ ಸಮಾಜದ ಜಿಲ್ಲಾ ಮುಖಂಡರನ್ನು ಪಕ್ಷದ ಹುದ್ದೆಯಿಂದ ತೆಗಿದಿದ್ದು ತಳವಾರ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.
ಇನ್ನೂ ಇಡೀ ರಾಜ್ಯದಲ್ಲಿರುವ ೧೦ ಲಕ್ಷಕ್ಕಿಂತ ಹೆಚ್ಚಿರುವ ಈ ತಳವಾರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಂದು ಗೌರವದ ಸ್ಥಾನ ಸಿಗದೆಯಿರುವುದು ವಿಷಾಧನೀಯ, ಅದರಲ್ಲೂ ಬೆಳಗಾವಿ, ಬಾಗಲಕೋಟ, ದಾರವಾಡ, ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ಸಮುದಾಯದ ಓರ್ವರಿಗೂ ಸೂಕ್ತವಾದ ಶ್ರೇಣಿಯ ಹುದ್ದೆ ನೀಡದೆಯಿರುವುದು ಪಕ್ಷದ ಹಿರಿಯ ಮುಖಂಡರ ಮೇಲೆ ತಳವಾರ ಸಮುದಾಯವು ತೀವ್ರವಾಗಿ ಖಂಡಿಸುತ್ತೆವೆ.
ಈ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರೀ ಸಣ್ಣಪ್ಪ ತಳವಾರ ಅವರನ್ನು ಮತ್ತೆ ಜಿಲ್ಲಾಧ್ಯಕ್ಷ ಹುದ್ದೆ ನೀಡಿ ಮತ್ತು ಈ ತಳವಾರ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.