ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ಜಿಲ್ಲಾ ಪ್ರವಾಸ ವಿವರ
ಡಿ-12 ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ..!
ವಿಜಯಪುರ ಡಿಸೆಂಬರ್ 10 : ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಡಿ.12ರಂದು ಸಂಜೆ 4 ಗಂಟೆಗೆ ಬೆಳಗಾವಿಯಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ಸಂಜೆ 5-00 ಗಂಟೆಗೆ ಜಿಲ್ಲೆಯ ಸಿಂದಗಿಗೆ ಆಗಮಿಸಿ, ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾತ್ರಿ 7 ಗಂಟೆಗೆ ಸಿಂದಗಿಯಿಂದ ಹೊರಟು 7-45ಕ್ಕೆ ವಿಜಯಪುರಕ್ಕೆ ಆಗಮಿಸಲಿದ್ದಾರೆ.
ಡಿ.12ರಂದು ವಿಜಯಪುರದ ಬಿಎಲ್‍ಡಿಇ ಎನ್‍ಆರ್‍ಐ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ, ಡಿ.13ರಂದು ಬೆಳಿಗ್ಗೆ 9 ಗಂಟೆಗೆ ವಿಜಯಪುರದಿಂದ ಬೆಳಗಾವಿಗೆ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.