ಡಿ-12 ರಿಂದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ
ಇಂಡಿ: ತಾಲೂಕಿನ ಆಳೂರ ಗ್ರಾಮದ ಆರಾಧ್ಯ ದೈವ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಡಿ. ೧೨ರಿಂದ ೧೫ರವರೆಗೆ ನಡೆಯಲಿದೆ.
ಡಿ.೧೨ರಂದು ನಂದಿಕೋಲಿಗೆ ರಾತ್ರಿ ೧೨ಘಂಟೆಗೆ ಬಾಸಿಂಗ ಕಟ್ಟುವುದು. ನಸಿಕಿನ ಜಾವ ೪ಘಂಟೆಗೆ ಸಕಲ ವಾದ್ಯ ವೈಭೋಗಳಿಂದ ನಂದಿ ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪುವುದು. ಡಿ.೧೩ರಂದು ಬೆಳಗ್ಗೆ ೫ಘಂಟೆಯಿಂದ ಶ್ರೀ ಶಂಕರಾನಂದ ಶ್ರೀಗಳ ಸಾನಿಧ್ಯದಲ್ಲಿ ಶ್ರೀ ವಿವೇಕಾನಂದ ಹಿರೇಮಠ (ಏಳಗಿ) ಇವರಿಂದ ಹೋಮ-ಹವನ ಕಾರ್ಯಕ್ರಮ ೧೦ಘಂಟೆಯಿಂದ ಹರದೇಶಿ, ನಾಗೇಶಿ ಡಪ್ಪಿನ ಪದ, ಭಕ್ತರಿಂದ ನೈವೇದ್ಯ, ಅಕ್ಕಿಪೂಜೆ ಕಟ್ಟುವುದು. ರಾತ್ರಿ ೧೦:೩೦ಘಂಟೆಗೆ ನಟರಾಜ ಡ್ರಾಮಾಸೀನರೀಜ್ ಪ್ರಕಾಶ ವಿಭೂತೆ ನಾಗಣಸೂರ ಇವರ ಭವ್ಯ ರಂಗಸಂಜ್ಜಿಕೆಯಲ್ಲಿ ಶ್ರೀ ನಂದಿ ಬಸವೇಶ್ವರ ನವತರುಣ ನಾಟ್ಯ ಸಂಘ ಆಳೂರ ಇವರಿಂದ ೧೦ನೇ ಕಲಾಕುಸುಮ ಅಭಿನಯಿಸಲ್ಪಡುವ ಶ್ರೀ ಶಂಕರಜೀ ಹೂವಿನಹಿಪ್ಪರಗಿ ವಿರಚಿತ ಸಾಮಾಜಿಕ ನಾಟಕ ‘ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ ಅರ್ಥಾರ್ತ ನಾ ಮಾಡಿದ ತಪ್ಪೆನು..? ನಡೆಯಲಿದ್ದು.
ಡಿ.೧೪ರಂದು ಬೆಳಗ್ಗೆ ೮ ಘಂಟೆಯಿಂದ ನಂದಿ ಬಸವೇಶ್ವರ ದೇವಸ್ಥಾನದಿಂದ ಭವ್ಯ ಮೆರವಣೆಗೆಯೊಂದಿಗೆ ನಂದಿ ಬಸವೇಶ್ವರ ನಂದಿಕೋಲು, ಪುರವಂತರೋಂದಿಗೆ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಮೆರವಣೆಗೆ ನಡೆದು ನಂತರ ದೇವರ ಗುಡಿಗೆ ತಲುಪುವುದು ಹಾಗೂ ಭಕ್ತರಿಂದ ಸಾಯಂಕಾಲ ೫ಘಂಟೆಗೆ ಭಾಷಿಂಗ ಇಳಿಸುವುದು, ಭಕ್ತರಿಂದ ಸಿಡಿಗಾಯಿ ಉಡೆಯುವದು.
ಡಿ.೧೫ರಂದು ಮಧ್ಯಾನ ೧ಘಂಟೆಯಿAದ ಜಂಗಿ ನಿಕಾಲಿ ಕುಸ್ತಿಗಳು ಜರಗುವವು. ಸಂಜೆ ೭ಘಂಟೆಗೆ ನಂದಿ ಬಸವೇಶ್ವರ ಗೆಳೆಯರ ಬಳಗದಿಂದ ಚಿತ್ರ-ವಿಚಿತ್ರ ಮದ್ದು ಸುಡುವದು ಎಂದು ಜಾತ್ರಾ ಕಮಿಟಿ ಪ್ರಕಟಣೆಗೆ ತಿಳಿಸಿದೆ.