ದೇಶದ ಘನತೆ ಗೌರವ ಎತ್ತಿಹಿಡಿಯುವ ಜಗತ್ತಿನ ಅತಿದೊಡ್ಡ ಸಂವಿಧಾನ : ನ್ಯಾಯಾಧೀಶ ಕೋಟೆಪ್ಪ ಕಾಂಬಳೆ
ಇಂಡಿ: ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರಿರುವ ದೇಶ, ನಮ್ಮ ಸಂವಿಧಾನ ರಚನೆಯ ಸಂಧರ್ಭದಲ್ಲಿ ರಚನಾ ಸಮಿತಿಯವರು ಜಗತ್ತಿನಾದ್ಯಂತ ಸುತ್ತಾಡಿ ಅಲ್ಲಿನ ಸಂವಿಧಾನಗಳನ್ನು ಅದ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ಕ್ರೂಡಿಕರಿಸಿ ನಮ್ಮ ದೇಶದ ಘನತೆ ಗೌರವ ಎತ್ತಿಹಿಡಿಯುವ ಜಗತ್ತಿನ ಅತಿದೊಡ್ಡ ಸಂವಿಧಾನ ರಚಿಸಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.
ಮಂಗಳವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಮತ್ತು ಸಿ.ವ್ಹಿ.ರಾಮನ್ ವಿಜ್ಞಾನ ಪದವಿ ಪೂರ್ವ ಕಾಲೇಜು, ಇಂಡಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ “ಸಂವಿಧಾನ ದಿನ”À ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂವಿಧಾನದ ಕುರಿತು ಸದನದಲ್ಲಿ ಚರ್ಚಿಸುವ ಸಮಯದಲ್ಲಿ ಕ್ಲಿಷ್ಟಕರವಾದ ಸಂದರ್ಭದಲ್ಲಿ, ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ ಉತ್ತರ ನೀಡುತ್ತಿದ್ದರು. ಸಂವಿಧಾನ ಹೇಗೆ ಅನ್ವಯಿಸುತ್ತೆ ಅಂದರೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಥಿಮ್ ಸಾಂಗ್ ನಲ್ಲಿರುವಂತೆ ನೀರಿನಂತೆ ನ್ಯಾಯ ಎಲ್ಲರಿಗೂ, ಗಾಳಿಯಂತೆ ನ್ಯಾಯ ಎಲ್ಲರಿಗೂ, ನೆಮ್ಮದಿಯ ನ್ಯಾಯ ಎಲ್ಲರಿಗೂ ಮತ್ತು ನಂಬಿಕೆಯ ನ್ಯಾಯ ಎಲ್ಲರಿಗೂ ಎಂಬಂತೆ ಎಂದು ಹೇಳಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿದ್ದ ನ್ಯಾಯವಾದಿ ವ್ಹಿ.ಎಸ್.ಹಂಜಗಿ ಮಾತನಾಡಿ, ಒಂದು ಮನೆ ನಿರ್ಮಾಣ ಮಾಡಬೇಕಾದರೆ ಅಡಿಪಾಯ ಎಷ್ಟು ಮಹತ್ವಯಿದೆಯೊ ಅಷ್ಟೇ ಮಹತ್ವ ದೇಶ ಬೇಳೆಯಬೇಕಾದರೆ ಇದೆ. ದೇಶ ಒಂದು ಶ್ರೇಷ್ಠ ದೇಶ ಆಗಬೇಕಾದರೆ ಅದಕ್ಕೆ ಸಂವಿಧಾನ ಬಹಳ ಮುಖ್ಯ ಎಂದರು.
ಸಂವಧಾನ ದಿನದ ಅಂಗವಾಗಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಭಂದ, ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ದಿವಾಣ ನ್ಯಾಯಾಧೀಶ ಸುನಿಲ್ ಕುಮಾರ್ ಎಂ.ಎಸ್. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ವಿ. ರಾಮನ್ ಕಾಲೇಜು ಅಧ್ಯಕ್ಷ ಶಿವಾನಂದ ಕಾಮಗೊಂಡ ವಹಿಸಿದ್ದರು,
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ಆರ್.ಬಿರಾದಾರ, ಕಾಲೇಜಿನ ಪಿ.ಜಿ.ನಾಡಗೌಡ, ಜೆ.ಬಿ.ಬೆನೂರ, ಎಸ್.ಬಿ.ನಿಂಬರಗಿಮಠ, ವಿ.ಪಿ. ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇಂಡಿ: ಸಿ.ವ್ಹಿ.ರಾಮನ್ ವಿಜ್ಞಾನ ಪದವಿ ಪೂರ್ವ ಕಾಲೇಜು, ಇಂಡಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ “ಸಂವಿಧಾನ ದಿನ”À ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.