• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ

    ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ

    ಕ್ರೀಡೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಜೀವನದ ಸಮೃದ್ಧಿಗೆ ಪೂಕರವಾಗಿವೆ

    ಕ್ರೀಡೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಜೀವನದ ಸಮೃದ್ಧಿಗೆ ಪೂಕರವಾಗಿವೆ

    ಕೃಷಿ ಚಟುವಟಿಕೆಯೊಂದಿಗೆ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಆಸಕ್ತಿ ವಹಿಸಬೇಕು : ಜಿಲ್ಲಾಧಿಕಾರಿ ಡಾ. ಆನಂದ.ಕೆ

    ಕೃಷಿ ಚಟುವಟಿಕೆಯೊಂದಿಗೆ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಆಸಕ್ತಿ ವಹಿಸಬೇಕು : ಜಿಲ್ಲಾಧಿಕಾರಿ ಡಾ. ಆನಂದ.ಕೆ

    ಗ್ರಾಹಕರ ಪ್ರೀತಿ ಮತ್ತು ವಿಶ್ವಾಸದ ಫಲವಾಗಿ ನಗರದ ಪಾಟೀಲ ಹೊಂಡಾ ಸೇವೆ ಮತ್ತು ಮಾರಾಟದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ

    ಗ್ರಾಹಕರ ಪ್ರೀತಿ ಮತ್ತು ವಿಶ್ವಾಸದ ಫಲವಾಗಿ ನಗರದ ಪಾಟೀಲ ಹೊಂಡಾ ಸೇವೆ ಮತ್ತು ಮಾರಾಟದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ

    ವಿಜಯಪುರದಲ್ಲಿ ಧರ್ಮಸ್ಥಳ ಚಲೋ ಅಂಗವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ‍್ಯಾಲಿ 

    ವಿಜಯಪುರದಲ್ಲಿ ಧರ್ಮಸ್ಥಳ ಚಲೋ ಅಂಗವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ‍್ಯಾಲಿ 

    ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಚಾಲನೆ

    ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಚಾಲನೆ

    ನಗರದ ಹಲವು ಸ್ಲಂ ಪ್ರದೇಶಗಳಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಕಣ್ಣು ಶಸ್ತ್ರಚಿಕಿತ್ಸೆ ಶಿಬಿರ

    ನಗರದ ಹಲವು ಸ್ಲಂ ಪ್ರದೇಶಗಳಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಕಣ್ಣು ಶಸ್ತ್ರಚಿಕಿತ್ಸೆ ಶಿಬಿರ

    ಅಭಿವೃದ್ಧಿಯಿಂದ ನಗರದಲ್ಲಿ ಅಸ್ತಮಾ ದೂರ

    ಅಭಿವೃದ್ಧಿಯಿಂದ ನಗರದಲ್ಲಿ ಅಸ್ತಮಾ ದೂರ

    ಖಾಯಂ ಜನತಾ ನ್ಯಾಯಾಲಯ ವಿಶೇಷ ಅಭಿಯಾನ

    ಖಾಯಂ ಜನತಾ ನ್ಯಾಯಾಲಯ ವಿಶೇಷ ಅಭಿಯಾನ

    ರಾಷ್ಟ್ರೀಯ ಕ್ರೀಡಾ ದಿನ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಮುಖ್ಯ: ಸಂತೋಷ ಬಂಡೆ

    ರಾಷ್ಟ್ರೀಯ ಕ್ರೀಡಾ ದಿನ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಮುಖ್ಯ: ಸಂತೋಷ ಬಂಡೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದ ಯುವಕರು

      Voiceofjanata.in

      November 25, 2024
      0
      ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದ ಯುವಕರು
      0
      SHARES
      255
      VIEWS
      Share on FacebookShare on TwitterShare on whatsappShare on telegramShare on Mail

      ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದ ಯುವಕರು

      ವಿಜಯಪುರ, ನ. 25: ಜಿಲ್ಲೆಯ ಕ್ರಿಯಾಶೀಲ ನಾಲ್ಕು ಜನ ಯುವಕರು ಕಠಿಣವಾದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಓಟವನ್ನು ಪೂರ್ಣಗೊಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

      ಶನಿವಾರ ಚಿಕ್ಕಮಗಳೂರಿನಲ್ಲಿ ನಡೆದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡ ವಿಜಯಪುರದ ರಘು ಸಾಲೋಟಗಿ ಮತ್ತು ಸಂದೀಪ ಮಡಗೊಂಡ 50 ಕಿ. ಮೀ. ಓಟ ಪೂರ್ಣಗೊಳಿಸಿದರೆ, ವೃಕ್ಷಥಾನ ಹೆರಿಟೇಜ್ ರನ್- 2024 ನೋಂದಣಿ ಸಮಿತಿ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ಶ್ರೀನಿವಾಸ ಸೊನ್ನದ 30 ಕಿ. ಮೀ. ಓಟ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ. ಈ ಸಾಧಕರಿಗೆ ವೃಕ್ಷಥಾನ ಹೆರಿಟೇಜ್ ರನ್ ಸಮಿತಿಯ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

      ಈ ನಾಲ್ಕೂ ಜನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಓಟವನ್ನು ಪೂರ್ಣಗೊಳಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ಇಂಥ ಓಟಗಳಲ್ಲಿಯೇ ಕಠಿಣವಾದುದು ಎಂದೇ ಖ್ಯಾತಿ ಪಡೆದಿದೆ. ದಟ್ಟ ಕಾಡು, ಕಾಫಿ ಎಸ್ಟೇಟ್, ಗುಡ್ಡಗಾಡು, ಕಿರಿದಾದ ರಸ್ತೆ, ಸ್ವಲ್ಪ ಆಯ ತಪ್ಪಿದರೂ ಆಳವಾದ ಕಂದಕಕ್ಕೆ ಬೀಳುವ ಆತಂಕ, ಕಾಡು ಪ್ರಾಣಿಗಳ ಭಯ, ಕೆಸರು ಪ್ರದೇಶ, ಹಳ್ಳಗಳನ್ನು ದಾಟಿ ಮುಂದೆ ಸಾಗುವುದು, ನೇರವಾದ ಗುಡ್ಡವನ್ನು ಹತ್ತುವಂಥ ಕಠಿಣ ಪರಿಸ್ಥಿತಿಯಲ್ಲಿ ಓಟಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಸಾಬೀತು ಪಡಿಸಿ ಈ ಓಟ ಪೂರ್ಣಗೊಳಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಹೃದಯ ಬಡಿತವೂ ಹೆಚ್ಚಾಗುತ್ತದೆ. ಇದಕ್ಕಾಗಿ ಈ ಓಟಗಾರರು ಸಾಕಷ್ಟು ಪೂರ್ವ ತಯಾರಿಸಿ ನಡೆಸಿ, ತಜ್ಞ ಓಟಗಾರರಿಂದ ಸಂಪೂರ್ಣ ಮಾಹಿತಿ ಪಡೆದು ಪಾಲ್ಗೋಳ್ಳಬೇಕಾಗುತ್ತದೆ.

      ಇಂಥ ಕಠಿಣ ಓಟದಲ್ಲಿ ಪಾಲ್ಗೊಂಡು ಪೂರ್ಣಗೊಳಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರಘು ಸಾಲೋಟಗಿ ನಾನು ಸಾಫ್ಟವೇರ್ ಎಂಜಿನಿಯರ್ ಆಗಿದ್ದೇನೆ. ನಾನು 50 ಕಿ. ಮೀ. ಓಟದಲ್ಲಿ ಓಡಿದ ಮೂರನೇ ಇವೆಂಟ್ ಇದಾಗಿದೆ. 21 ಕಿ. ಮೀ. ಹಾಫ್ ಮ್ಯಾರಾಥಾನ್ ಗಳಲ್ಲಿ 40 ಬಾರಿ ಪಾಲ್ಗೋಂಡಿದ್ದೇನೆ. ಅಲ್ಲದೇ, 10 ಕಿ. ಮೀ. ಓಟದಲ್ಲಿ 100ಕ್ಕೂ ಹೆಚ್ಚು ಬಾರಿ ಪಾಲ್ಗೋಂಡಿದ್ದೇನೆ. ಈ ಬಾರಿಯ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ 3 ಸಲ ಪಾಲ್ಗೋಂಡಿದ್ದೇನೆ. ಪ್ರಕೃತಿ ಸೌಂದರ್ಯದ ಮಧ್ಯೆ ಓಡುವುದು ಅತ್ಯದ್ಭುತ ಅನುಭವ ನೀಡುತ್ತದೆ. ಈ ಸಂದರ್ಭದಲ್ಲಿ ಸುಮಾರು 1.80 ಕಿ. ಮೀ. ಎತ್ತರದಲ್ಲಿರುವ ಗುಡ್ಡವನ್ನು ಹತ್ತಿ ಇಳಿಯಬೇಕಾಗುತ್ತದೆ. ಹಳ್ಳಗಳಲ್ಲಿ ಶೂಗಳನ್ನು ಬಿಚ್ಚಿ ನೀರು ದಾಟಬೇಕಾಗುತ್ತುದೆ. ದಾರಿಯಲ್ಲಿ ಬರುವ ಎಲ್ಲ ಸವಾಲುಗಳನ್ನು ಮೀರಿ ಓಟ ಪೂರ್ಣಗೊಳಿಸಿರುವುದು ಸಂತಸವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

      ವಿಜಯಪುರ ನಗರದ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುವ ಸಂದೀಪ ಮಡಗೊಂಡ ಮಾತನಾಡಿ, ಇದು ನಾನು ಪಾಲ್ಗೊಂಡ ಮೊದಲ 50 ಕಿ. ಮೀ. ಓಟವಾಗಿತ್ತು. ಇದಕ್ಕೂ ಮುಂಚೆ 30 ಕಿ. ಮಿ. ನಲ್ಲಿ ಒಂದು ಸಲ ಮತ್ತು 21 ಕಿ. ಮೀ. ಓಟದಲ್ಲಿ 11 ಬಾರಿ ಪಾಲ್ಗೋಂಡಿದ್ದೇನೆ. ಆದರೆ, ಈ ಬಾರಿಯ ಓಟ ರೋಮಾಂಚಕವಾಗಿತ್ತು. ಈ ಓಟದಲ್ಲಿ ಶೇಕಡ 50 ಭಾಗ ಓಡಬೇಕಾದರೆ, ಮತ್ತೆ ಶೇ. 50 ಭಾಗ ನಡೆದುಕೊಂಡು ಸಾಗಬೇಕಾಗುತ್ತದೆ. ದಾರಿಯಲ್ಲಿ ಹೃದಯ ಬಡಿತದ ಬಗ್ಗೆ ಗಮನವಿಡಬೇಕಾಗುತ್ತದೆ. ಸ್ಮಾರ್ಟ್ ವಾಚ್ ಕಡ್ಡಾಯವಾಗಿ ಧರಿಸಲೇಬೇಕು. ಜೊತೆಗೆ ಹೆಗಲಿಗೊಂದು ಬ್ಯಾಗು ಹಾಕಿಕೊಂಡು ನೀರು ಮತ್ತು ಸಕ್ಕರೆಯುಕ್ತ ಪಾನೀಯಗಳನ್ನು ಇಟ್ಟುಕೊಂಡು ಓಡಬೇಕಾಗುತ್ತದೆ. ನಾವು ಓಡುವಾಗ ಹೃದಯ ಬಡಿತ ಕೆಲವು ಬಾರಿ 180ರ ವರೆಗೆ ಇರುತ್ತದೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುವ ಓಟವನ್ನು ಸಂಜೆ 5 ಗಂಟೆಯೊಳಗೆ ಪೂರ್ಣವಾಗಬೇಕು. ಆದರೆ, ನಾನು ನಿಗದಿತ ಅವಧಿಗೂ ಮುಂಚೆಯೇ ಪೂರ್ಣಗೊಳಿಸಿರುವುದು ಖುಷಿ ನೀಡಿದೆ ಎಂದು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

      ವೈತ್ತಿಯಲ್ಲಿ ಆಯುರ್ವೇದ ವೈದ್ಯ ಮತ್ತು ವ್ರಕ್ಷಥಾನ ಹೆರಿಟೇಜ್ ರನ್ ನೋಂದಣಿ ಸಮಿತಿ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಯಲಗೊಂಡ ಮಾತನಾಡಿ, ನಾನು ಈಗಾಗಲೇ 21 ಕಿ. ಮೀ. 5 ಓಟಗಳ್ಲಲಿ ಪಾಲ್ಗೊಂಡಿದ್ದೇನೆ. 10 ಕಿ. ಮೀ. ಓಟದಲ್ಲಿ ಆರು ಬಾರಿ ಮತ್ತು ಇದೇ ಮೊದಲ ಬಾರಿ ಅಲ್ಟ್ರಾ ರನ್ ನಲ್ಲಿ ಪಾಲ್ಗೋಂಡಿದ್ದೇನೆ. ಮೂರ್ನಾಲ್ಕು ಗುಡ್ಡಗಳನ್ನು ಹತ್ತಿ ಇಳಿಯುವುದು, ದುರ್ಗಮ ಪ್ರದೇಶದಲ್ಲಿ ಆಯ ತಪ್ಪಿದರೂ ಕಂದಕಕ್ಕೆ ಬೀಳುವ ಅಪಾಯದ ನಡುವೆ ಕಿರಿದಾದ ಕಿರುಹಾದಿಯಲ್ಲಿ ಓಡಿದ್ದು ರೋಮಾಂಚನ ನೀಡಿದೆ. ಈ ಓಟಕ್ಕಾಗಿ ನಾನು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆ. ನಿರಂತರ ಪ್ರ್ಯಾಕ್ಟೀಸ್ ಮಾಡುವುದರಿಂದ ಇದು ಸಾಧ್ವಯಾಗಿದೆ. ನುರಿತ ಓಟಗಾರರಿಂದ ಮಾಹಿತಿ ಪಡೆದಿದ್ದು ಮತ್ತು ಈ ಹಿಂದಿನ ಎಲ್ಲ ಓಟಗಳ ಅನುಭವ ಇಲ್ಲಿ 30 ಕಿ. ಮೀ. ಓಟ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.

      ಶ್ರೀನಿವಾಸ್ ಸೊನ್ನದ ಮಾತನಾಡಿ, 30 ಕಿ. ಮೀ. ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡಿದ್ದು ಎಂದೂ ಮರೆಯದ ಘಳಿಗೆಯಾಗಿದೆ. ಹಚ್ಚ ಹಸಿರಿನ ಪರಿಸರದ ಮಧ್ಯೆ ಹೆಜ್ಜೆ ಹಾಕುತ್ತ ಓಡುವುದು ಇದೇ ಮೊದಲ ಬಾರಿ. ಈ ಮುಂಚೆ ನಾನು ನಾಲ್ಕು ಬಾರಿ 21 ಕಿ. ಮೀ. ಓಟದಲ್ಲಿ ಪಾಲ್ಗೋಂಡಿದ್ದೇನೆ. ಆದರೆ, ಈ ಸಲದ ಓಟ ಎಂದೂ ಮರೆಯಲು ಸಾಧ್ಯವಿಲ್ಲ. ವಿಜಯಪುರ ವೃಕ್ಷೊಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳು ಚಾತಕ ಪಕ್ಷಿಯಂತೆ ಕಾಯುತ್ತಿರುವೆ ಎಂದು ತಿಳಿಸಿದರು.

      ವಿಜಯಪುರದ ಮ್ಯಾರಾಥಾನ್ ಓಟಗಾರರು

      ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡ ವಿಜಯಪುರದ ರಘು ಸಾಲೋಟಗಿ ಮತ್ತು ಸಂದೀಪ ಮಡಗೊಂಡ 50 ಕಿ. ಮೀ. ಮತ್ತು ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ಶ್ರೀನಿವಾಸ ಸೊನ್ನದ 30 ಕಿ. ಮೀ. ಓಟದಲ್ಲಿ ಪಾಲ್ಗೋಂಡ ಬಳಿಕ ತಮ್ಮ ಸ್ನೇಹಿತರೊಂದಿಗೆ ಸಂತಸ ಹಂಚಿಕೊಂಡರು.

      Tags: #indi / vijayapur#Public News#The youth who participated in the marathon and brought glory to the district#Today News#Voiceofjanata.in#ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದ ಯುವಕರು
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ

      ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ

      ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ

      August 30, 2025
      ಮಾಂತ್ರಿಕ ಮೇಜರ್ ಧ್ಯಾನಚಂದ ಕ್ರೀಡಾ ಸಾಧನೆ ಎಲ್ಲರಿಗೂ ಸ್ಪೂರ್ತಿ

      ಮಾಂತ್ರಿಕ ಮೇಜರ್ ಧ್ಯಾನಚಂದ ಕ್ರೀಡಾ ಸಾಧನೆ ಎಲ್ಲರಿಗೂ ಸ್ಪೂರ್ತಿ

      August 30, 2025
      ಕ್ರೀಡೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಜೀವನದ ಸಮೃದ್ಧಿಗೆ ಪೂಕರವಾಗಿವೆ

      ಕ್ರೀಡೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಜೀವನದ ಸಮೃದ್ಧಿಗೆ ಪೂಕರವಾಗಿವೆ

      August 30, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.