Nov-26 ರಂದು ಜೋಡಗುಡಿಯಲ್ಲಿ ಸಾಮೂಹಿಕ ವಿವಾಹ
ಇಂಡಿ : ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯಲ್ಲಿ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನ ಜೋಡಗುಡಿ ತಡವಲಗಾ ದಲ್ಲಿ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ನಿಮಿತ್ಯ ನ. ೨೫ ರಂದು ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ರಾಚೋಟೇಶ್ವರ ಶ್ರೀಗಳು ತಿಳಿಸಿದರು.
ರವಿವಾರ ನ ೨೪ ರಂದು ಸಾಯಂಕಾಲ ೬ ಗಂಟೆಗೆ ಅಬ್ಬೆ ತುಮಕೂರ ವಿಶ್ವರಾಧ್ಯರ ಪುರಾಣ ಮಹಾಮಂಗಲ ಕಾರ್ಯಕ್ರಮ ನಡೆಯುವದು. ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಶ್ರೀಗಳ ಸಾನಿದ್ಯ, ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀಗಳು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರರು, ಗೋಳಸಾರದ ಅಭಿವನ ಪುಂಡಲಿAಗ ಶಿವಯೋಗಿಗಳು, ರೋಡಗಿಯ ಶಿವಲಿಂಗೇಶ್ವರ ಶ್ರೀಗಳು, ತಡವಲಗಾದ ಶಿವಾನಂದಯ್ಯ ಶ್ರೀಗಳು ಉಪಸ್ಥಿತರಿರುವರು.
ಸೋಮವಾರ ನ. ೨೫ ರಂದು ಉಜೈನಿ ಮಹಾ ಸಂಸ್ಥಾನ ಪೀಠದ ರಾಜದೇಶಿಕೇಂದ್ರ ಶಿವಾಚಾರ್ಯರರ ಸಾನಿಧ್ಯದಲ್ಲಿ ಶ್ರೀ ಮಹಾ ಲಕ್ಷಿö್ಮÃ ದೇವಸ್ಥಾನದ ಯಾತ್ರಾ ನಿವಾಸ ಹಾಗೂ ಶ್ರೀ ಮಹಾಲಕ್ಷಿö್ಮÃ ಕಾರ್ಯಾಲಯದ ಭೂಮಿಪೂಜೆ ಮತ್ತು ಶ್ರೀ ಮರುಳ ಸಿದ್ದೇಶ್ವರ ರಥ ನಿರ್ಮಾಣ ಚಾಲನೆ ನಂತರ ಮಧ್ಯಾಹ್ನ ೧೨.೩೦ ಗಂಟೆಗೆ ಸರ್ವ ಧರ್ಮ ಸಾಮೂಹಿಕ ವಿವಾಹ ಜರುಲಿದೆ. ಸಂಜೆ ೭ ಗಂಟೆಗೆ ಧರ್ಮ ಸಭೆ ಮತ್ತು ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗುತ್ತವೆ.
ತುಂಬಗಿಯ ಮಹಾತಲಿಂಗ ಶಿವಾಚಾರ್ಯರರು, ಅಥರ್ಗಾದ ಮುರಗೇಂದ್ರ ಶ್ರೀಗಳು, ದೇವರ ಹಿಪ್ಪರಗಿಯ ವೀರ ಗಂಗಾಧರ ಶ್ರೀಗಳು, ಸಿಂಧನೂರದ ಸೋಮನಾಥ ಶಿವಾಚಾರ್ಯರರು, ತಡವಲಗಾದ ಶಿವಯೋಗಿದೇವರು, ಇಂಚಗೇರಿಯ ರುದ್ರಮುನಿ ದೇವರು, ಶಾಸಕ ಯಶವಂತರಾಯಗೌಡ ಪಾಟೀಲರು, ಸಂಸದ ರಮೇಶ ಜಿಗಜಿಣಗಿ, ಎಸಿ ಅಬೀದ ಗದ್ಯಾಳ, ಖ್ಯಾತ ವೈದ್ಯ ಡಾ|| ವಿಲಾಸ ಕುಲಕಣ ð ಭಾಗವಹಿಸುವರು ಎಂದು ಶ್ರೀಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ|| ರಮೇಶ ಪೂಜಾರಿ, ಗ್ರಾ.ಪಂ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ, ರಾಮು ರೂಗಿ,ಸಂಪತಕುಮಾರ ಹಳ್ಳಿ, ಮತ್ತಿತರಿದ್ದರು.
ರಾಚೋಟೇಶ್ವರ ಶ್ರೀಗಳು