ಸ್ವಚ್ಛತೆಯಿಂದ ರೋಗವನ್ನು ತಡೆಗಟ್ಟಲು ಸಾಧ್ಯ: ಅಂಬಲಗಿ
ಇಂಡಿ: ಪಟ್ಟಣದ ಅಂಬೆಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಬಯಲು ಮಲ ವಿಸರ್ಜನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಮಾತನಾಡಿ, ಪ್ರತಿಯೊಂದು ಮನೆಗೂ ಶೌಚಾಲಯ ಮಾಡಿಕೊಳ್ಳಬೇಕು. ಅದರಿಂದ ರೋಗಗಳನ್ನು ತಡೆಗಟ್ಟುತ್ತವೆ. ಹೆಣ್ಣು ಮಕ್ಕಳಿಗೆ ಗರ್ಭಿಣ , ಬಾಣಂತಿಯರಿಗೆ, ವಯೋವೃದ್ದರಿಗೆ, ಅಂಗವಿಕಲರಿಗೆ ಅನುಕೂಲವಾಗುತ್ತದೆ ರಾತ್ರಿ ಹಾಗೂ ಮಳೆಗಾಲದಲ್ಲಿ ವಿಷಜಂತುಗಳಿAದ ರಕ್ಷಣೆ. ಬಯಲು ಮಲ ವಿಸರ್ಜನೆಯಿಂದ ಮಕ್ಕಳು ಅತೀಸಾರ ಕಾಲರಾ, ಭೇದಿಯಂತಹ ಕಾಯಿಲೆಗಳು. ಕರುಳು ಬೇನೆ ಮತ್ತು ಅಪೌಷ್ಠಿಕತೆಯಿಂದ ಮಕ್ಕಳು ಬಳಲುತ್ತಿವೆ ಕೆಟ್ಟ ವಾಸನೆ ಮತ್ತು ಮಣ ್ಣನ ಮಾಲಿನ್ಯವನ್ನು ತಡೆಗಟ್ಟುವದು. ದಾವಾಖಾನೆ ಮತ್ತು ಆಸ್ಪತ್ರೆಯ ಖರ್ಚು ಉಳಿಸಬಹುದು. ಸ್ವಚ್ಚ ಭಾರತ ಅಭಿಯಾನದಡಿ ಶೌಚಾಲಯದ ಸುರಕ್ಷತೆಯ ಬಗ್ಗೆ ಸರಕಾರ ಹಲವಾರು ಜಾಗೃತಿ ಮೂಡಿಸುತ್ತಾ ಬಂದಿದೆ. ೨೦೩೦ ರ ವೇಳೆಗೆ ವಿಶ್ವದ ಎಲ್ಲ ವ್ಯಕ್ತಿಯು ಶೌಚಾಲಯ ಹೊಂದಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.
ಕಾಂಗ್ರೇಸ್ ಮುಖಂಡ ಬೀಮಾಶಂಕರ ಮೂರಮನ ಮಾತನಾಡಿ, ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸ್ವಚ್ಚ ಭಾರತ ಅಡಿಯಲ್ಲಿ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳಬೇಕು. ಸರ್ಕಾರ ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದೆ ಇನ್ನು ಕೆಲವೊಂದು ಗ್ರಾಮಗಳಲ್ಲಿ ಶೌಚಾಲಯ ಇಲ್ಲ ಎಲ್ಲರೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಾಯ್.ಎಮ್.ಪೂಜಾರಿ ಮಾತನಾಡಿ, ನವೆಂಬರ್ ೧೯ರಿಂದ ಡಿಸೆಂಬರ್ ೧೦ ರವರೆಗೆ ನಿರಂತರವರೆಗೆ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶಿರ್ಷಿಕೆ ಹಾಗೂ “ಅಂದದ ಶೌಚಾಲಯ ಆನಂದದ ಜೀವನ”ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಅಂದೋಲನವನ್ನು ಆಯೋಜನೆ ಮಾಡಿದೆ. ಆರೋಗ್ಯದ ಕಡೆಗೆ ಸೂಕ್ತ ಗಮನ ಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಚ್.ಅತ್ನೂರ, ಪಿ.ಎ.ಬೂದಿಹಾಳ, ಪಿ.ಎಸ್.ಬಡಿಗೇರ, ಪ್ರಿಯಾಂಕಾ ಅಹಿರಸಂಗ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳು ಇಂದ್ದರು.
ಇಂಡಿ: ಪಟ್ಟಣದ ಅಂಬೆಡ್ಕರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಬಯಲು ಮಲ ವಿಸರ್ಜನೆಯಿಂದ ಆಗುವ ದುಷ್ಪರಿಣಾಮಗಳ ಕಾರ್ಯಕ್ರಮದಲ್ಲಿ ಸುನಂದಾ ಅಂಬಲಗಿ ಮಾತನಾಡಿದರು.