ಇಂಡಿಯಲ್ಲಿ ಕೆರೆ ತುಂಬುವ ಹಾಗೂ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ಇಂಡಿ : ಹಿರೇ ಇಂಡಿ ಕೆರೆ ಒತ್ತುವರಿ ತೆರವುಗೊಳಿಸಿ ಮತ್ತು ಕೆಸರಾಳ ತಾಂಡಾ ಹಾಗೂ ಬಡಿಗೇರ ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ರೈತರಿಂದ ತಾಲ್ಲೂಕು ಆಡಳಿತ ಸೌಧದ ಎದುರು
ಬೃಹತ್ ಪ್ರತಿಭಟನೆ ಬುಧವಾರ ನಡೆಯಿತು.
ಪಟ್ಟಣದ ಮಹಾವೀರ ವೃತದಿಂದ ಪ್ರತಿಭಟನೆ ಪ್ರಾರಂಭಿಸಿ ಬಸವೇಶ್ವರ ವೃತ್ ದ ಮೂಲಕ ತಾಲ್ಲೂಕು ಆಡಳಿತ ಸೌಧಕ್ಕೆ ಆಗಮಿಸಿ ತಹಶಿಲ್ದಾರ ಬಿ.ಎಸ್ ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ರೈತ ಮೂರ್ಚಾ ಅಧ್ಯಕ್ಷ ಅಶೋಕ ಅಕಲಾದಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಕಾರ್ಯದರ್ಶಿ ಮಲ್ಲಪ್ಪ ಗುಡ್ಲ ಮಾತನಾಡಿ, ರೈತರ ಹಿತ ಕಾಪಾಡುವಲ್ಲಿ
ನಿರ್ಲಕ್ಷ್ಯ ವಹಿಸಿರುವ ಅಧಿಕಾರಿ ಹಾಗೂ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿರೇ ಇಂಡಿ ಕೆರೆ ಪುರಾತನವಾದದ್ದು, ಅದು ಇಡೀ ನಗರಕ್ಕೆ ಕುಡಿಯುವ ನೀರು ಸೇರಿದಂತೆ ವ್ಯವಸಾಯಕ್ಕೆ ಅತ್ಯಂತ ಸಹಕಾರಿಯಾಗಿತ್ತು. ಆದರೆ ಇಂದು ಸತತ ಬರಗಾಲ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಕೆರೆ ಸಂಪೂರ್ಣ ಒತ್ತುವರಿಯಾಗಿದ್ದು, ಮಳೆ ಹನಿ ನೀರು ನಿಲ್ಲಲ್ಲು ಸಾಧ್ಯವಿಲ್ಲದಂತಹ ಇಕ್ಕಟ್ಟಾದ ಪ್ರದೇಶವಾಗಿದೆ. ಈ ಸದ್ಯ ಜನ- ಜಾನುವಾರುಗಳಿಗೆ ಹಾಗೂ ವ್ಯವಸಾಯಕ್ಕೆ ನೀರಿನ ಸಮಸ್ಯೆ ಯಾಗುತ್ತಿದೆ. ಈ ಕೂಡಲೇ ಕೆರೆಯ ಒತ್ತುವರಿ ತೆರವುಗೊಳಿಸಿ, ಅಳತೆ ಮಾಡಿ , ಹದ್ದು ಬಸ್ತುಗೊಳಿಸಬೇಕು. ಅದಲ್ಲದೇ ಕೆರೆ ತುಂಬುವ ಕಾರ್ಯ ನಡೆಯಬೇಕು. ಅದರಂತೆ ಬಡಿಗೇರ ಕೆರೆ ಮತ್ತು ಕೆಸರಾಳ ತಾಂಡಾ ಕೆರೆ ತುರ್ತಾಗಿ ತುಂಬುವ ಯೋಜನೆ ಕೈಗೊಳ್ಳಬೇಕು. ಇನ್ನೂ ಮಹಾವೀರ ವೃತದಿಂದ ಹಿರೇಇಂಡಿ ಹನುಮಾನ ದೇವಸ್ಥಾನದ ವರೆಗೆ ರಸ್ತೆ ಸುಧಾರಣೆ ಮಾಡಬೇಕು. ಈಗಾಗಲೇ ಈ ಬಗ್ಗೆ ಅನೇಕ ಬಾರಿ ಪುರಸಭೆ ಮತ್ತು ತಹಶಿಲ್ದಾರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದೆವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಜರುಗಿಲ್ಲ. ಇನ್ನೂ ಅದೆ ನಿರ್ಲಕ್ಷ್ಯ ವಹಿಸಿದ್ದರೆ ಉಗ್ರವಾಗಿ ಮತ್ತು ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಧ್ಯಾಸಾಗರ ಧನಶೆಟ್ಟಿ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಪ್ರಶಾಂತ ಲಾಳಸಂಗಿ, ವಿಜಯಕುಮಾರ್ ರಾಠೋಡ, ಸಂಜು ದಶವಂತ, ಶ್ರೀಶೈಲ ಪೂಜಾರಿ, ಮಾಳು ಪೂಜಾರಿ, ಮಲ್ಲು ಬಳಗಾರಿ ವಿಜುಗೌಡ ಪಾಟೀಲ, ಮಹೇಶ ಹೂಗಾರ, ಪ್ರಶಾಂತ ಗೌವಳಿ, ಸಾಗರ ಬಿರಾದಾರ, ವಾಗೇಶ್ ನಾವಿ, ಶ್ರೀಕಾಂತ್ ಹೊಟಗಿ, ಜಗದಿಶ್ ಹೊಟಗಿ, ಭೀಮರಾಯ ಲಾಳಸಂಗಿ, ಸಂಜು ಪವಾರ, ಜಯರಾಮ ರಾಠೋಡ, ಕಾಂತು ಚವ್ಹಾಣ, ಅಶೋಕ ತಾಂಬೆ, ವಾಗೇಶ ಮಲಗಾಣ ಇನ್ನೂ ಅನೇಕರು ಉಪಸ್ಥಿತರಿದ್ದರು.