ಇಂಡಿ : ಇಂದು ರಾಜ್ಯ ಸರಕಾರಿ ತಾಲ್ಲೂಕು ನೌಕರರ ಸಂಘದ ಚುನಾವಣೆ..! ಫಲಿತಾಂಶ ಏನಾಯಿತು ಗೊತ್ತಾ..!
ಇಂಡಿ : ಇಂದು ರಾಜ್ಯ ಸರಕಾರಿ ನೌಕರರ ಇಂಡಿ ತಾಲ್ಲೂಕು ಘಟಕದ ಚುನಾವಣೆ ನಡೆಯಿತು.ಶನಿವಾರ ಪಟ್ಟಣದ ಸರಕಾರಿ ನೌಕರ ಸಂಘದ ಕಾರ್ಯಾಲಯದಲ್ಲಿ ೨೦೨೪-೨೯ ನೇ ಅವಧಿಯ ತಾಲೂಕು ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಗಳಿಗೆ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಬಿ ಎ ರಾವೂರ ಹಾಗೂ ಎಸ್ ಡಿ ಪಾಟೀಲ ಸ್ಪರ್ಧಿಸಿದರು. ಒಟ್ಟು 33 ಮತದಾರರಿದ್ದು ಬಿ ಎ ರಾವೂರ 18 ಮತ ಪಡೆದರೆ, ಎಸ್ ಡಿ ಪಾಟೀಲ 15 ಮತ ಪಡೆದರು. 3 ಮತಗಳ ಅಂತರದಿಂದ ಬಿ ಎ ರಾವೂರ ಆಯ್ಕೆ ಯಾಗಿ ಅಧ್ಯಕ್ಷ ಗದ್ದುಗೆ ಏರಿದರು.
ಇನ್ನೂ ಖಜಾಂಚಿ ಹುದ್ದೆಗೆ ಎಸ್ ಎಸ್ ಪ್ಯಾಟ್ ಹಾಗೂ ವ್ಹಿ.ಪಿ ನಾಯಕ ಸ್ಪರ್ಧೆ ಮಾಡಿದರು. ಎಸ್ ಎಸ್ ಪ್ಯಾಟಿ ಒಟ್ಟು 33 ಮತದಾರರಲ್ಲಿ 17 ಮತ ಪಡೆದರೆ ವ್ಹಿ.ಪಿ ನಾಯಕ 16 ಮತ ಪಡೆದಿದ್ದು, 1 ಮತದ ಅಂತರದಲ್ಲಿ ಎಸ್ ಎಸ್ ಪ್ಯಾಟಿ ಜಯಬೇರಿಯಾಗಿದ್ದಾರೆ.
ಇನ್ನೂ ರಾಜ್ಯ ಪರಿಷತ್ ಸದಸ್ಯರ ಸ್ಥಾನಕ್ಕೆ ಬಸವರಾಜ ಮೇತ್ರಿ ಹಾಗೂ ವಿಜಯಕುಮಾರ್ ಪೋಳ ಸ್ಪರ್ಧಿಸಿದರು. ಒಟ್ಟು 33 ಮತದಾರರಲ್ಲಿ ಬಸವರಾಜ ಮೇತ್ರಿ 17 ಮತ ಪಡೆದರೆ, ವಿಜಯಕುಮಾರ್ ಪೋಳ 16 ಮತ ಪಡೆದರು. 1 ಮತದ ಅಂತರದಿಂದ ಬಸವರಾಜ ಮೇತ್ರಿ ಗೆಲು ಸಾಧಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಅಂಬಣ್ಣ ಸುಣಗಾರ ತಿಳಿಸಿದರು. ಯಾವುದೇ ತೊಂದರೆ ಸಮಸ್ಯೆಯಾಗದಂತೆ ಅತ್ಯಂತ ಶಾಂತತೆ ಚುನಾವಣೆ ನಡೆಯಿತು ಎಂದು ತಿಳಿಸಿದರು.