ಮಕ್ಕಳು ದೇಶದ ನಿಜವಾದ ಆಸ್ತಿ : ನಜೀರ್
ಇಂಡಿ: ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ನವಂಬರ್ ೧೪ ಗುರುವಾರರಂದು ಮಕ್ಕಳ ದಿನಾಚರಣೆಯನ್ನು ಪಂಡಿತ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶೈಕ್ಷಣ ಕ ಮಾರ್ಗದರ್ಶಕ ನಜೀರ್ ಹುಂಡೇಕರ್ ಅವರು ಮಾತನಾಡುತ್ತಾ, ಮಕ್ಕಳು ದೇಶದ ನಿಜವಾದ ಆಸ್ತಿ, ಅವರು ಶಾಲೆಯಲ್ಲಿ ಮಾನವೀಯ ಮೌಲ್ಯ, ಶಿಸ್ತನ್ನು ಅಳವಡಿಸಿಕೊಂಡು ಒಳ್ಳೆಯ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜ ಗುರುತಿಸುವಂತಹ ಮಾದರಿ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಶಾಲಾ ವಿಭಾಗದ ಪ್ರಾಂಶುಪಾಲ ಪ್ರಕಾಶ ಪಾಟೀಲ ಮಾತನಾಡಿ, “ಮಕ್ಕಳು ತೋಟದಲ್ಲಿ ಅರಳುವ ಹೂಗಳಿದ್ದಂತೆ ಆ ಹೂಗಳು ಹೇಗೆ ಸುಗಂಧವನ್ನು ಬೀರುತ್ತವೆಯೋ” ಹಾಗೆ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವ ಮೂಲಕ ಪಾಲಕರ, ಶಾಲೆಯ, ಕೀರ್ತಿಯನ್ನು ಹೆಚ್ಚಿಸಬೇಕೆಂದು ಮಕ್ಕಳಿಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಎಫ್.ಕೆ. ದೋಶಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ದಳವಾಯಿ, ಸಮಸ್ತ ಶಾಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು.
ಶಿಕ್ಷಕಿಯರಾದ ಅಶ್ವಿನಿ ಗಾಯಕವಾಡ, ಕವಿತಾ ದೊಡಮನಿ, ಸ್ವಾತಿ ಪಾಟೀಲ, ಶ್ವೇತಾ ದಾಮಜಿ, ಸ್ವಾತಿ ಸುರಪುರ, ಹಾಗೂ ಮಂಜು ಎಂ, ನಡೆಸಿಕೊಟ್ಟ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಗಮನಸೆಳೆದವು. ಈ ಕಾರ್ಯಕ್ರಮವನ್ನು ಶಿಕ್ಷಕರಾದ ಭೀಮರಾಯ ಕಡಿಹಳ್ಳಿ ಅವರು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಇಂಡಿ: ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ನವಂಬರ್ ೧೪ ಗುರುವಾರರಂದು ಮಕ್ಕಳ ದಿನಾಚರಣೆಯನ್ನು ಪಂಡಿತ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.