ಲಿಂಬೆ ನಾಡಿನಲ್ಲಿ ರಾರಾಜಿಸಿದ ಕನ್ನಡ ವೈಭವ
ಕನ್ನಡ ನಾಡಿಗೆ ಅನೇಕ ಮಹನೀಯರ ಕೊಡುಗೆ ಇದೆ – ಎಸಿ ಅಬೀದ್ ಗದ್ಯಾಳ
ಇಂಡಿ : ಲಿಂಬೆ ನಾಡಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಹೃದಯಭಾಗದ ಪ್ರಮುಖ ಮುಖ್ಯ ರಸ್ತೆಯಲ್ಲಿ ಕನ್ನಡ ಬಾವುಟ ಹಿಡಿದು, ಕರ್ನಾಟಕದ ಕನ್ನಡ ಶಕ್ತಿ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಅದ್ದೂರಿ ಮತ್ತು ವಿಜೃಂಭಣೆಯಿಂದ ಜರುಗಿದವು.
ಶುಕ್ರವಾರ ಪಟ್ಟಣದ ಪೋಲಿಸ ಪರೇಡ ಮೈದಾನದಲ್ಲಿ ತಾಲೂಕಾ ಆಡಳಿತದಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಜರುಗಿತು.
ಇದೆ ಸಂದರ್ಭದಲ್ಲಿ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿದ ಅವರು, ಸಾವಿರಾರು ವರ್ಷ ಇತಿಹಾಸವಿರುವ ಕನ್ನಡನಾಡು, ನುಡಿ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ. ಕನ್ನಡನಾಡು ಹಚ್ಚ ಹಸುರಿನ ಸುಂದರ ಬೆಟ್ಟಗುಡ್ಡಗಳ ನದಿಗಳು ಹರಿಯುವ ಬೀಡು, ಸಾಧು ಸಂತರು, ದಾಸರು ಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂದರು.
ಉಪನ್ಯಾಸ ನೀಡಿ ಕಸಾಪ ಮಾಜಿ ಅಧ್ಯಕ್ಷ ಡಾ. ಕಾಂತು ಇಂಡಿ ಮಾತನಾಡಿ ಬೇಲೂರು,ಹಳೆಬೀಡು, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶ್ರೇಷ್ಠ ವಾಸ್ತು ಶಿಲ್ಪಿ ಹೊಂದಿದ್ದು ಕದಂಬರು, ಚಾಲುಕ್ಯರು, ರಾಷ್ಟçಕೂಟರು ಇತ್ಯಾದಿ ರಾಜಮನೆತನಗಳ ಕೊಡುಗೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಯ ಹೆಚ್ಚಿಸಿವೆ. ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಈ ನಾಡು ಪಂಪ,ರನ್ನ, ಪೊನ್ನ, ಜನ್ನ, ಕುಮಾರವ್ಯಾಸ ಹರಿಹರರಂತಹ ಮಹಾಕವಿಗಳನ್ನು ನೀಡಿದೆ. ಮನುಕುಲೋದ್ಧಾರಕ ಹೊಂಗಿರಣವಾದ ವಿಶ್ವಗುರು ಬಸವಣ್ಣನವರಂಥ ತತ್ವ ಚಿಂತಕರನ್ನು ಕರ್ನಾಟಕ ಸಂಗೀತವನ್ನು ವಿಶ್ವಮಟ್ಟಕ್ಕೇರಿಸಿದ ಪುರಂದರದಾಸರನ್ನು ವೈಚಾರಿಕ ಪ್ರಿಯ ಹರಿಕಾರರಾದ ಕನಕದಾಸರನ್ನು ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದ ಸಿ.ಎನ್.ಆರ್ ರಾವ ಅವರನ್ನು ಕೊಡುಗೆಯಾಗಿ ನೀಡಿದೆ ಎಂದರು. ತಹಸೀಲ್ದಾರ ಬಿ.ಎಸ್.ಕಡಕಬಾವಿ, ಓ,ಒ ಹೂಗಾರ ಮಾತನಾಡಿದರು.
ವೇದಿಕೆಯ ಮೇಲೆ ಡಿವಾಯ್‌ಎಸ್ಪಿ ಜಗದೀಶ ಎಚ್.ಎಸ್, ಮುಖ್ಯಾದಿಕಾರಿ ಮಹಾಂತೇಶ ಹಂಗರಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಟಿ,ಎಸ್‌ಅಲಗೂರ. ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ಮಂಜುನಾಥ ಧುಳೆ, ಎಸ್.ಆರ್.ರುದ್ರವಾಡಿ, ಡಾ. ರಾಜಕುಮಾರ ಅಡಕಿ ಮತ್ತಿತರಿದ್ದರು.
ಇದೇ ವೇಳೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕಿ ಶಶಿಕಲಾ ಬಡಿಗೇರ ಇವರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸ್ಪರ್ಧೇಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೇದ ಮೋಮಿನ್, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಧರ್ಮರಾಜ ವಾಲಿಕಾರ, ಅಯೂಬ ನಾಟಿಕಾರ, ರೈಸ ಅಷ್ಟೇಕರ, ಶಿವು ಮಲಕಗೊಂಡ ಮಂಜು ತೇಲಿ, ಶ್ರೀಶೈಲ ಪೂಜಾರಿ, ದಶರಥ ಕೋರಿ, ಪ್ರಾಚಾರ್ಯ ಎ.ಪಿ.ಬೆರಡ ಮತ್ತಿತರಿದ್ದರು.
ಇಂಡಿ ಪಟ್ಟಣದ ಪೋಲಿಸ ಪರೆಡ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕಿ ಶಶಿಕಲಾ ಬಡಿಗೇರ ಇವರನ್ನು ಸನ್ಮಾನಿಸಲಾಯಿತು.
ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಮಾತಾಡುತ್ತೀರುವ ಭಾವಚಿತ್ರ.