ಬಿಜೆಪಿ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ : ಬಿಜೆಪಿ ಕಾಸುಗೌಡ ಬಿರಾದಾರ
ಇಂಡಿ: ಪಹಣಿಗಳಲ್ಲಿ ವಕಪ್‌ಭೋರ್ಡ ಹೆಸರು ದಾಖಲಿಸಲು ಮುಂದಾಗಿದ್ದ ರಾಜ್ಯ ಸರಕಾರ ಬಿಜೆಪಿ ಪಕ್ಷದ ಹೋರಾಟಕ್ಕೆ ಮಣಿದು ಪಹಣ ಯಲ್ಲಿ ಸೇರಿಸಿದ್ದ ವಕಪ್ ಬೋರ್ಡ ಹೆಸರನ್ನು ಅಳಿಸಿ ಹಾಕಿದೆ. ಅದಾಗ್ಯೂ ಯಾವುದಾದರೂ ರೈತರ ಪಹಣಿ ಯಲ್ಲಿ ವಕಪ್ ಬೋರ್ಡ ಹೆಸರು ಉಳಿದಿದ್ದರೆ ಕೂಡಲೆ ಬಿಜೆಪಿ ಮುಖಂಡರ ಗಮನಕ್ಕೆ ತರಬೇಕೆಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ರೈತರ ಪಹಣ ಯಲ್ಲಿ ವಕಪ್ ಬೋರ್ಡ ಹೆಸರು ತೇಲಿಸಿದ್ದಕ್ಕೆ ಖಂಡಿಸಿ ನ್ಯಾಯಾಂಗದ ಮೊರೆ ಹೋಗಲು ನಿರ್ಧರಿಸಿದ್ದರಲ್ಲದೆ, ದೊಡ್ಡ ಹೋರಾಟದ ಸುಳಿವು ನೀಡಿದ್ದರು. ಅವರ ಹೇಳಿಕೆಗೆ ಬೆದರಿದ ಸರಕಾರ ಕೊನೆಗೂ ಪಹಣ ಗಳಲ್ಲಿನ ವಕಪ್‌ಬೋರ್ಡ ಹೆಸರು ಅಳಿಸಿ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಈಗಾಗಲೆ ಹಿಂಪಡೆದ ಬಗ್ಗೆ ಸ್ಪಷ್ಠನೆ ನೀಡಿದ್ದು ಇನ್ನೂ ಯಾರ ಪಹಣ ಯಲ್ಲಿ ವಕಪ್ ಬೋರ್ಡ ಹೆಸರು ಉಳಿದಿದೆಯೋ ಅವರು ಬಿಜೆಪಿ ಮುಖಂಡರ ಗಮನಕ್ಕೆ ತರಬೇಕೆಂದು ತಿಳಿಸಿದರು.
ಭೀಮರಾಯ ಮದರಖಂಡಿ, ಪ್ರಕಾಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಮಲ್ಲು ಗುಡ್ಲ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಕಾಸುಗೌಡ ಬಿರಾದಾರ ಭಾವಚಿತ್ರ.