ದೀಪಾವಳಿ ಹಬ್ಬ ಪಟಾಕ್ಷಿ ಮಾರಾಟಕ್ಕೆ ಅನುಮತಿ ಪಡೆಯುವದು ಕಡ್ಡಾಯ : ಎಸಿ ಅಬೀದ್ ಗದ್ಯಾಳ
ಇಂಡಿ : ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಕೆಲವೊಂದು ಕಡೆ ತಾತ್ಕಾಲಿಕ ಹಾಗೂ ಖಾಯಂ ವ್ಯಾಪಾರಸ್ಥರು ಪಟಾಕಿ ಮಾರಾಟ ಮಾಡಲು ತಾಲೂಕು ಆಡಳಿತದಿಂದ ಅನುಮತಿ ಪಡೆಯುವದು ಕಡ್ಡಾಯವಾಗಿದ್ದು ಪಟಾಕಿ ಮಾರಾಟಗಾರರು ಸೋಮವಾರದೊಳಗೆ ತಾಲೂಕು ಆಡಳಿತಕ್ಕೆ ದಾಖಲಾತಿಗಳನ್ನು ಸಲ್ಲಿಸಿ ಪರವಾನಿಕೆ ಪಡೆದುಕೊಳ್ಳಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಮತ್ತು ತಾಲೂಕಿನ ವಿವಿಧ ಪಟಾಕಿ ವ್ಯಾಪರಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತಾಲೂಕಾ ಮಟ್ಟದಲ್ಲಿ ತಹಸೀಲ್ದಾರರು ಜಂಟಿ ಸಮೀಕ್ಷಾ ನಡೆದ ಪರವಾನಿಕೆಗೆ ಶಿಫಾರಸು ಮಾಡಬೇಕು. ವ್ಯಾಪಾರಸ್ಥರು ಪಟಾಕ್ಷಿಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಮಳಿಗೆ ಹಾಕಲು ವಿಜಯಪುರ ರಸ್ತೆಯಲ್ಲಿರುವ ಟಿಎಪಿಎಸ್ ಎಂಸ್ ಕಟ್ಟಡದ ಮುಂದಿರುವ ವಿಶಾಲ ಮೈದಾನದಲ್ಲಿ ಸುರಕ್ಷತ ವಿಧಾನಗಳನ್ನು ಅಳವಡಿಸಿಕೊಂಡಿರುವದನ್ನು ಖಾತ್ರಿ ಪಡಿಸಿಕೊಂಡು ಪರವಾನಿಗೆ ಸಂಬAದಿಸಿದ ಅಧಿಕಾರಿಗಳು ಶಿಫಾರಸು ಮಾಡಬೇಕು. ಜನನಿಬಿಡ ಪ್ರದೇಶದಲ್ಲಿ ಪಟಾಕ್ಷಿ ಮಾರಾಟವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು.
ಹಸಿರು ಪಟಾಕ್ಷಿಗಳಿಗೆ ಮಾರಾಟಕ್ಕೆ ಮಾತ್ರ ಪರವಾನಿಕೆ ನೀಡಲಾಗುವದು. ಅಂಗಡಿಗಳಲ್ಲಿ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಪಟಾಕ್ಷಿಗಳು ಸಂಗ್ರಹಣೆ ಮಾಡಕೂಡದು. ಬೆಂಕಿ ಅವಘಡ ಸಂಭವಿಸದAತೆ ಮರುಳು,ನೀರು, ಅಗ್ನಿ ನಿರೋಧಕ ಮುಂಜಾಗೃತೆ ಕ್ರಮಗಳನ್ನು ಅಳವಂಡಿಸಿಕೊAಡಿರುವ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ನಂತರವೇ ತಹಸೀಲ್ದಾರರು ಪರವಾನಿಕೆ ಶಿಫಾರಸು ಮಾಡಬೇಕು ಎಂದರು.
ಗ್ರಾ.ಪA ಪ್ರದೇಶಗಳಲ್ಲಿ ಅಂಗಡಿಗಳಿಗೆ ಗುರುತಿಸಿದ ಪ್ರದೇಶದಲ್ಲಿ ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರುವಂತೆ ನೋಡಿಕೊಳ್ಳಬೇಕು . ಸಂತೆ ಶಾಲೆ ಹೆಚ್ಚು ಜನಸಂದಣ ಇರುವ ಕಡೆ ಪಟಾಕ್ಷಿ ಅಂಗಡಿ ಹಾಕದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಸಿ.ಪಿ.ಐ ರತನಕುಮಾರ ಜಿರಗಿಹಾಳ,ಎಸ್.ಜಿ.ತೇಲಿ, ಎಇಇ ಸಂಜವಾಡ ವ್ಯಾಪಾರಸ್ಥರಾದ ರೂಪಾಲಿ ಧನಶೆಟ್ಟಿ, ರಮೇಶ ಏಳಗಿ, ಮಾರುತಿ ದಶವಂತ, ಮಹೇಶ ಮೇತ್ರಿ, ರವಿಕಾಂತ ವಾಲಿಕಾರ ಮತ್ತಿತರಿದ್ದರು.