ಇಂಡಿ : ಚುನಾವಣೆ ಬಂದಾಗ ಮಾತ್ರ ಪಕ್ಷ, ಪಂಗಡ ಎನ್ನಬೇಕು. ಉಳಿದೆಲ್ಲ ದಿನಗಳಲ್ಲಿ ಜನರ ಏಳಿಗೆಗೋಸ್ಕರ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲ್ಲೂಕಿನ ಸುರಗಿಳ್ಳಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿ ಸಮುದಾಯ ಭವನ ನೀರ್ಮಾಣ ಕಾಮಗಾರಿ ಮತ್ತು ೨೦೨೨-೨೩ನೇ ಸಾಲಿನ ಜಲಜೀವನ ಮಿಷನ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ಭೂಮಿ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿ ಸಮುದಾಯ ಭವನ ರೂ೨೫ ಲಕ್ಷ ಮತ್ತು ಮನೆ ಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ರೂ ೧೮೬.೪೩ ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದೇನೆ ಮತ್ತು ಈ ಗ್ರಾಮದಲ್ಲಿ ಹಲವಾರು ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡುತ್ತೆನೆ. ಈ ಗ್ರಾಮದ ಅಭಿವೃದ್ಧಿ ಜವಾಬ್ದಾರಿ ನನ್ನ ತಲೆ ಮೇಲಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ಪೂರ್ವಾಗ್ರಹ ಪೀಡಿತರಾಗಬಾರದು. ನಾವೆಲ್ಲರೂ ಜನರ ಸೇವಕರು ಅನ್ನೋದನ್ನ ಅರಿತುಕೊಳ್ಳಬೇಕು. ಸಂದರ್ಭ ಬಂದಾಗ ಮಾನವೀಯತೆ ದೃಷ್ಟಯಿಂದ ನಾವೆಲ್ಲ ಒಂದಗಿ ಕೆಲಸ ಮಾಡಬೇಕು. ಇಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡಿ ಕೆಲಸ ಮಾಡಬೇಕಾಗುತ್ತದೆ. ಪರ, ವಿರೋಧ ಎನ್ನದೆ ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡೋಣ ಎಂದರು. ಶಾಸಕನಾದ ಕೆಲೇ ತಿಂಗಳಲ್ಲಿ ಸಾಕಷ್ಟು ಸವಾಲು ಎದುರಿಸಿ ನನ್ನ ಮತ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು ಸಾಧನೆ. ಇನ್ನೂ ಹೆಚ್ಚು ಸಾಧನೆ ಮಾಡಿ ತೋರಿಸಬೇಕಿದೆ.
ಚನ್ನಮಲಯ್ಯ ಹಿರೇಮಠ, ಪಂಚಯ್ಯ ಹಿರೇಮಠ, ಕಾಂತನಗೌಡ ಪಾಟೀಲ, ಶಂಕರ ಹಿರೋಳಿ, ಸಿದ್ದಾರಾಮ ಅಗಟಗಿ, ಕಾಸು ಬಾಸಗಿ, ಸಿದ್ದರಾಮ ಪವಾರ, ಅಶೋಕ ಬಾಸಗಿ, ರಮೇಶ ಬಾಸಗಿ, ಷಣ್ಮಖ ದುರ್ಗದ, ಗೋಪಾಲ ಜಾಧವ ಉಪಸ್ಥಿತರಿದ್ದರು.