ಇಂಡಿ: ತಾಲೂಕಿನ ಭತಗುಣಕಿ ಗ್ರಾಮದ ಬಸವರಾಜ ಮಹಾಂತಗೌಡ ಪಾಟೀಲ ವಯಾ 43 ಆಗಸ್ಟ್ 30ರಂದು ತಮ್ಮ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಎಂದು ತಾಯಿಗೆ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಸಂಬಂಧಿಕರು, ಸ್ನೇಹಿತರು, ಬಂಧು ಬಳಗದವರಿಗೆ ಸಂಪರ್ಕಿಸಿ ವಿಚಾರಿಸಿ ತದನಂತರ ತಾಯಿ ಕಮಲಾಬಾಯಿ ಮಹಾಂತಗೌಡ ಪಾಟೀಲ್ ಅವರು ಝಳಕಿ ಪೊಲೀಸ್ ಠಾಣೆಗೆ ಬಂದು ಸೆಪ್ಟೆಂಬರ್ 16ರಂದು ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದು ಇರುತ್ತದೆ.
ಸದರಿಯವರು ಎಲ್ಲಿಯಾದರೂ ಕಂಡರೆ ಕೂಡಲೇ ಝಳಕಿ ಪೊಲೀಸ್ ಠಾಣೆಗೆ ತಿಳಿಸಲು ಪಿಎಸ್ಐ ಮನವಿ ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ-ಸಾಧ ಕಪ್ಪು ಬಣ್ಣ, ಬಿಳಿ ಬಣ್ಣದ ಅಂಗಿ ಹಾಕಿಕೊಂಡಿದ್ದು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ, 157 ಅಡಿ ಎತ್ತರವಿದ್ದಾರೆ,