ಶಿಕ್ಷಕ ಸಮಾಜ ನಿರ್ಮಾಣ ಮಾಡುವ ಕತೃಗಳು: ಶಾಸಕ ಪಾಟೀಲ
ಇಂಡಿ : ಇಡೀ ಪ್ರಪಂಚದಲ್ಲಿ ಶಿಕ್ಷಕರು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ಸಮೂಹ. ಆದ್ದರಿಂದಲೇ ಶಿಕ್ಷಕರು ಜಗತ್ತಿನಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನೂ ಓರ್ವ ಶಿಕ್ಷಕ ರಾಷ್ಟ್ರದ ಪ್ರಥಮ ಪ್ರಜೆಯಾಗಿ ಕಂಡಿದ್ದು ಭಾರತದಲ್ಲಿ ಮಾತ್ರ. ಆದರೆ ಈ ಶಿಕ್ಷಕರನ್ನು ದೇವ ಎಂದು ಕಾಣುವ ವಿಶೇಷತೆ ನಮ್ಮ ಭಾಗದಲ್ಲಿ ಮಾತ್ರ ಕಾಣುತ್ತೆವೆ. ವಿಧ್ಯಾರ್ಥಿ ಭವಿಷ್ಯ ಬೆಳಗಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುರುಭವನದಲ್ಲಿ ಜಿ.ಪಂ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ತಾಲೂಕು ಆಡಳಿತ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಸಹಯೋಗದಲ್ಲಿ ನಡೆದ ಭಾರತ ರತ್ನ ಡಾ. ಎಸ್ ರಾಧಾ ಕೃಷ್ಣನ್ ರವರ ಜನ್ಮದಿನೋತ್ಸವದ ಕಾರ್ಯಕ್ರಮ ಅಧ್ಯಕ್ಷತೆವಹಿಸಿ, ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಜನತೆ ಅಥರ್ಗಾ ರೇವಣಸಿದ್ದರನ್ನು ಮತ್ತು ನಿಂಬಾಳದ ರಾನಡೆ ಮಹಾರಾಜರನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು. ಶಿಕ್ಷಕ, ಗುರು ಬರಿದಾಗದ ಅಕ್ಷಯಪಾತ್ರೆ. ವಿದ್ಯರ‍್ಥಿಗಳನ್ನು ಉನ್ನತ ಸ್ಥಾನಕ್ಕೆ ಮಾಡಹೊರಟಿರುವ ಅಪರೂಪದ ರೂವಾರಿ, ಇಡೀ ಸಮುದಾಯವೇ ಈ ಕಾರಣಕ್ಕೆ ಶಿಕ್ಷಕರನ್ನು ಗೌರವಿಸುತ್ತದೆ ಎಂದರು.
ಇನ್ನೂ ಗುರುದೇವ ಆಶ್ರಮ ಕಾತ್ರಾಳದ ಪರಮಪೂಜ್ಯ ಡಾ. ಅಮೃತಾನಂದ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದ ಅವರು, ನೈತಿಕ ಮೌಲ್ಯಗಳನ್ನು ಮುಗ್ಧ ಮಕ್ಕಳ ಮನದಲ್ಲಿ ಅಕ್ಷರವ ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಸುಂದರ ನಾಡನ್ನು ಕಟ್ಟುವ ಶಿಲ್ಪಿಗಳು ಶಿಕ್ಷಕರು ಎಂದು ಹೇಳಿದರು.
ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧವೆಂದರೆ ಶಿಕ್ಷಣ. ಇಂತಹ ಪವಿತ್ರ ಶಿಕ್ಷಣ ವೃತ್ತಿಯಿಂದ ಬಂದ ವಿಶಿಷ್ಠ ವ್ಯಕ್ತಿತ್ವದ ಶಿಕ್ಷಕರು. ಭಾರತದ ಪುರಾತನ ಪರಂಪರೆಯ ಹಿರಿಮೆ ಗರಿಮೆಗಳನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ ಸಾರಬೇಕಾಗಿದೆ ಎಂದರು.
ಕಂದಾಯ ಉಪ ವಿಬಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ತಾಯಿ ಜೀವ ಕೊಟ್ಟರೆ, ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಶಿಕ್ಷಕ ಸುಂದರ ಬದುಕು ನೀಡುತ್ತಾನೆ. ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಿ ನೀವು ನೀಡುತ್ತಿರುವ ವಿದ್ಯೆ ಶ್ರೇಷ್ಠ. ನೀವು ಪಡೆಯುತ್ತಿರುವುದು ಸಂಭಾವನೆ ಅಲ್ಲ, ಅದು ಗೌರವಧನ. ಸಮಾಜವನ್ನು ನಿರ್ಮಾಣ ಮಾಡುತ್ತಿರುವವರು ನೀವುಗಳು. ಶಿಕ್ಷಕ ವೃತ್ತಿ ಚಿಕ್ಕದು, ಬೇರೆಯವರ ಹುದ್ದೆ ದೊಡ್ಡದು ಎಂದು ಭಾವಿಸಬಾರದು. ನಾವು ಮಾಡುತ್ತಿರುವ ಕೆಲಸ ದೊಡ್ಡದು. ಜಗತ್ತಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಕಲಿಸುತ್ತಿರುವ ವಿದ್ಯೆ ಮರೆಯುವಂತಿಲ್ಲ. ಶಿಕ್ಷಕರ ಅನುಕರುಣೆ ನಾವು ಕೊನೆಯವರಿಗೆ ಅದು ಅಚ್ಚಳೆಯದ ವಿದ್ಯೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರಕಾರಿ ಶಾಲೆಗಳಲ್ಲಿ ಬಹುತೇಕ ನಿರ್ಗತಿಕರ, ಅನಾಥರ, ಬಡವರ ಮಕ್ಕಳೇ ಕಲಿಯುತ್ತಾರೆ. ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ವಿದ್ಯಾವಂತರಾಗಿ ಮಾಡುವ ಕರ‍್ಯ ಪ್ರತಿಯೊಬ್ಬ ಶಿಕ್ಷಕರು ಅಚ್ಚುಕಟ್ಟಾಗಿ ಮಾಡಬೇಕೆಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಪ್ರಕಾಶ ನಾಯಕ, ಆನಂದ ಹುಣಸಗಿ, ಬಸವರಾಜ ಗೊರನಾಳ ಮಾತನಾಡಿದರು.
ಕಾರ್ಯಕ್ರಮದ ವಿಳಂಬದ ಹಿನ್ನೆಲೆಯಲ್ಲಿ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ದಕ್ಷತೆ, ಕ್ರಿಯಾಶೀಲತೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮನಸ್ಸಿರಬೇಕು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ವೇದಿಕೆಯ ಮೇಲೆ ಸಿದ್ದರಾಮೇಶ್ವರ ಪಟ್ಟದದೇವರು, ಬಸವಾನಂದ ಶ್ರೀಗಳು, ತಹಸೀಲ್ದಾರ ಬಿ.ಎಸ್. ಕಡಕಬಾವಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಲ್.ಸಿ. ಗಿರಣ ವಡ್ಡರ, ಅಲ್ಲಾಬಕ್ಷ ವಾಲಿಕಾರ, ಎ.ಓ.ಹೂಗಾರ, ಸುಜಾತಾ ಪೂಜಾರಿ, ಎಸ್.ಡಿ. ಪಾಟೀಲ, ಎಸ್.ಆರ್. ಪಾಟೀಲ, ವಾಯ್.ಟಿ. ಪಾಟೀಲ, ನಿಜಣ್ಣಾ ಕಾಳೆ, ಎಂ.ಎಚ್. ಬ್ಯಾಳಿ, ಪಿ.ಜಿ. ಕಲ್ಮನಿ, ಪ್ರಕಾಶ ಐರೋಡಗಿ, ಶಂಕರ ಕೋಳೆಕರ, ಜಾವೀದ ಮೋಮಿನ್, ಭೀಮಣ್ಣ ಕವಲಗಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಯಶವಂತ್ರಾಯಗೌಡ ಪಾಟೀಲ, ಹಗೂ ಅಮೃತಾನಂದ ಶ್ರೀಗಳು ಉದ್ಘಾಟಿಸಿದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅಮೃತಾನಂದ ಶ್ರೀಗಳು ಮಾತನಾಡಿದರು.
ಇಂಡಿ: ಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕರ‍್ಯಕ್ರಮದಲ್ಲಿ ತಾಲೂಕ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು.