ಶ್ರೀ ಮೂಗಪ್ಪ ರಾಮವ್ವ ತಾಯಿಯ ಭಕ್ತರಿಂದ 2 ನೇ ವರ್ಷದ ಅನ್ನಸಂತರ್ಪಣೆ
ಹನೂರು: ಬೆನಕನ ಅಮಾವಾಸ್ಯೆ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಎಣ್ಣೆಮಜ್ಜನ ಸೇವೆಯ ಪ್ರಯುಕ್ತ ಶ್ರೀ ಮೂಗಪ್ಪ ರಾಮವ್ವ ತಾಯಿಯ ಭಕ್ತರಿಂದ ನಡೆದ 2 ನೇ ವರ್ಷದ ಅನ್ನಸಂತರ್ಪಣೆ ನಡೆಯಿತು.
ಶ್ರೀ ಮೂಗಪ್ಪ ರಾಮವ್ವ ತಾಯಿಯವರ ವಂಶಸ್ಥರು ಹಾಗೂ ಸರಗೂರಿನ ಶರಣರಾದ ಶ್ರೀ ಸಿದ್ದಪ್ಪ ಸ್ವಾಮಿ ಹಾಗೂ ಶ್ರೀ ರಾಜುಸ್ವಾಮಿ ಯವರು ಭಾಗವಹಿಸಿ ಪೂಜೆ ನೆರವೇರಿಸಿ ಅನ್ನಸಂತರ್ಪಣೆ ಗೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಅಪಾರ ಭಕ್ತವೃಂದ ಪಾಲ್ಗೊಂಡು ಸೇವೆ ಮಾಡುತ್ತಿರುವುದು ಅಪಾರ ಸಂತಸ ತಂದಿದೆ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪ್ರಥಮ ಪಡವಲು ಪರಿಷೆಯ ಕರ್ತೃ ಹಾಗೂ ಇಂದಿನ ಎಲ್ಲಾ ಹೆಣ್ಣು ಮಕ್ಕಳ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಸರಗೂರಿನ ಶರಣರಾದ ಶ್ರೀ ಮೂಗಪ್ಪ ರಾಮವ್ವ ರವರು ಕಾರಣೀಭೂತರು ಎಂಬುದು ಇಂದಿನ ಹಲವು ಭಕ್ತರಿಗೆ ತಿಳಿಯದಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು, ಈ ನಿಟ್ಟಿನಲ್ಲಿ ಪ್ರಾಧಿಕಾರದ ಅಧಿಕಾರಿಗಳು ನಿಜ ಸಂಗತಿಯನ್ನು ಭಕ್ತರಿಗೆ ಪರಿಚಯಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು, ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಅನ್ನ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮದ್ದೂರು ಕನಕಪುರ ಪಾದಯಾತ್ರೆ ತಂಡದ ಹರೀಶ್,ಆನಂದ್, ಕಾವೇರಿ ಪುರ ಗ್ರಾಮದ ಮಹಾದೇವ ಶೆಟ್ಟಿ ಸರಗೂರಿನ ರಾಮಸ್ವಾಮಿ.
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ