ಸೆ- 6 ರಿಂದ ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ.
ಇಂಡಿ : ತಾಲ್ಲೂಕಿನ ಸುಕ್ಷೇತ್ರ ಹಿರೇರೂಗಿ ಗ್ರಾಮದಲ್ಲಿ ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ಸೆ- 6 ರಿಂದ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಗಿ 3 ದಿನಗಳ ಕಾಲ ಜರುಗುತ್ತದೆ ಎಂದು ಜಾತ್ರಾ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಸೆ – 6 ರಂದು ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೊತ್ಸವ ಅದ್ದೂರಿಯಾಗಿ ಜರುಗುತ್ತದೆ. ಸೆ- 6 ರಂದು ಸಾಯಂಕಾಲ ಬಳಗಾನೂರ, ತೆನ್ನಿಹಳ್ಳಿ, ಬನ್ನಿಹಟ್ಟಿ, ಬೊಳೆಗಾಂವ ಸೇರಿದಂತೆ 11 ಗ್ರಾಮಗಳ ದೇವರ ಪಲ್ಲಕ್ಕಿಗಳು ಶ್ರೀ ಜಟ್ಟಿಂಗೇಶ್ವರ ದೇವಸ್ಥಾನಕ್ಕೆ ಆಗಮನ ಮಾಡುತ್ತೆವೆ. ಮರುದಿನ ಸೆ-7 ರಂದು ದೇವರು ಹೂವಿನಲ್ಲಿ ಕೂರುವುದು, ತದನಂತರ ವಿವಿಧ ಕಲಾವಿದರಿಂದ ಲಾಗ, ವಾಲಗ ಹಾಗೂ ತಾಲ್ಲೂಕು, ಜಿಲ್ಲೆಯ ಸೇರಿದಂತೆ ಸುಪ್ರಸಿದ್ಧ ಗಾಯಕರಿಂದ ಡೊಳ್ಳಿ ಪದಗಳು ಹಗಲು ಮತ್ತು ಇರಳು ಜರುಗುತ್ತೆವೆ. ಸೆ – 8 ರಂದು ವಿವಿಧ ವಾದ್ಯ ಹಾಗೂ ಡೊಳ್ಳು ಕುಣಿತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಅದಲ್ಲದೇ ಸಾಯಂಕಾಲ ಮಳೆ, ಬೆಳೆ ಹಾಗೂ ನಾಡಿನ ಇತರೆ ಬೆಳವಣಿಗೆ ಕುರಿತು ಪೂಜಾರಿಗಳಿಂದ ಹೇಳಿಕೆಗಳು ನಡೆಯುತ್ತೆವೆ.
ವಿಶೇಷ ಬೋಜನೆ : ಜೋಳದ ರೊಟ್ಟಿ, ಶೇಂಗಾ ಸಾರು ಹಾಗೂ ಸಜಕ, ಅನ್ನ ಸೇರಿದಂತೆ ವಿಶೇಷ ಅನ್ನಪ್ರಸಾದ್ ದಾಸೋಹ 3 ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ.
ಈ ಸಂದರ್ಭದಲ್ಲಿ ಜಟ್ಟೆಪ್ಪ ಮೂಲಿಮನಿ, ಮಾಳಪ್ಪ ಸಿದಬೀರಗೊಳ, ನಿಂಗಪ್ಪ ನಂದಪ್ಪಗೋಳ, ಬಾಬುರಾಯ ಮಾವಿನಹಳ್ಳಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.