• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ

    ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ

    ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಯಶಸ್ವಿಗೊಳಿಸಿ -ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ

    ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಯಶಸ್ವಿಗೊಳಿಸಿ -ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ

    ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ.

    ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ.

    ಅಂಜುಮನ್ ಚುನಾವಣೆ ಶೀಘ್ರದಲ್ಲಿ ನಡೆಸಲು ತಹಶಿಲ್ದಾರರಿಗೆ ಮನವಿ

    ಅಂಜುಮನ್ ಚುನಾವಣೆ ಶೀಘ್ರದಲ್ಲಿ ನಡೆಸಲು ತಹಶಿಲ್ದಾರರಿಗೆ ಮನವಿ

    ಮುಖ್ಯ ಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಕಿವಡೆ

    ಮಳೆ ಅವಾಂತರ, ತಕ್ಷಣ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಅಗ್ರಪಡಿಸುತ್ತೇನೆ :ಬಿಜೆಪಿ ಮುಖಂಡ ಕಿವಡೆ

    ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ:ವೃತ್ತ ನಿರೀಕ್ಷಕರು ಆನಂದ್ ಮೂರ್ತಿ

    ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ:ವೃತ್ತ ನಿರೀಕ್ಷಕರು ಆನಂದ್ ಮೂರ್ತಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ ಆಲಮಟ್ಟಿ ಎತ್ತರಕ್ಕೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ -ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ

      Voiceofjanata.in

      August 21, 2024
      0
      ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ ಆಲಮಟ್ಟಿ ಎತ್ತರಕ್ಕೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ -ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ
      0
      SHARES
      232
      VIEWS
      Share on FacebookShare on TwitterShare on whatsappShare on telegramShare on Mail

      ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ
      ಆಲಮಟ್ಟಿ ಎತ್ತರಕ್ಕೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ -ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ

      ವಿಜಯಪುರ, ಆಗಸ್ಟ್ 21 :  ಆಲಮಟ್ಟಿ ಜಲಾಶಯ ಎತ್ತರದಿಂದ ಬಾಧಿತವಾಗುವ ಪ್ರದೇಶದಲ್ಲಿ ಪುನರ್‍ವಸತಿ, ಪುನರ್‍ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಿದ್ಧವಿದ್ದು, ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಹೇಳಿದರು.

      ಬುಧವಾರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ 2ನೇ ತೀರ್ಪು ಬಂದಿದ್ದು, ತೀರ್ಪಿನನ್ವಯ ಆಲಮಟ್ಟಿ ಎತ್ತರ ಹೆಚ್ಚಳದಿಂದಾಗಿ 130 ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದೆ. 130 ಟಿಎಂಸಿ ನೀರನ್ನು ಬಳಕೆ ಮಾಡಲು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಮಾತ್ರ ಆಲಮಟ್ಟಿ ಎತ್ತರ ಹೆಚ್ಚಿಸಲು ಸಾಧ್ಯವಾಗುತ್ತದೆ. 519.6 ರಿಂದ 524.256 ಮೀ. ಎತ್ತರಿಸಿದಾಗ ಮಾತ್ರ 130 ಟಿಎಂಸಿ ನೀರು ದೊರೆಯಲಿದೆ. ಆಲಮಟ್ಟಿ ಎತ್ತರ ಹೆಚ್ಚಳದಿಂದ 14.68 ಲಕ್ಷ ಎಕರೆ ಜಮೀನು ನೀರಾವರಿಗೊಳಪಟ್ಟು ರೈತರಿಗೆ ಅನುಕೂಲವಾಗಲಿರುವುದರಿಂದ ಶೀಘ್ರವೇ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

      ಪುನರ್‍ವಸತಿ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಿದ್ಧವಿದ್ದು, ಈ ಹಿಂದೆ 52 ಸಾವಿರ ಕೋಟಿ ರೂ. ಪುನರ್‍ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಲೆಕ್ಕಾಚಾರ ಮಾಡಲಾಗಿತ್ತು, ಪ್ರಸ್ತುತ 82 ಸಾವಿರ ಕ್ಕೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ನೀರಾವರಿಗಾಗಿ 5 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಖರ್ಚು ಮಾಡುವ ಉದ್ದೇಶ ಹೊಂದಿರುವುದರಿಂದ ಅಧಿಸೂಚನೆ ಹೊರಡಿಸುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲಾಗುವುದು. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
      ಆಲಮಟ್ಟಿ ಡ್ಯಾಂ ಸಂಪೂರ್ಣವಾಗಿ ತುಂಬಿದೆ. ನೀರಿನ ಮಟ್ಟ 519.6 ಮೀ. ತಲುಪಿದೆ. ರಾಜ್ಯದಾದ್ಯಂತ ಇರುವ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಕಬಿನಿ, ಕಾವೇರಿ ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ, ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಭದ್ರಾ ಜಲಾಶಯ ಅಷ್ಟೇ ಅಲ್ಲದೇ ವಿದ್ಯುತ್ ಉತ್ಪಾದನೆ ಮಾಡುವ ಶರಾವತಿ, ಸೂಪಾ, ವಾಣಿ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಅಂತರ್‍ಜಲ ಮಟ್ಟ ಹೆಚ್ಚಾಗಿ, ಬೊರವೆಲ್ ನೀರು ಸುಲಭವಾಗಿ ದೊರೆಯಲಿದೆ. ಉತ್ತಮ ಬೆಳೆಯ ಇಳುವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

      130 ಟಿಎಂಸಿ ಸಾಮಥ್ಯ ಹೊಂದಿರುವ ತುಂಗಭದ್ರಾ ಡ್ಯಾಂ ನ 19ನೇ ಗೇಟ್ ಕಳಚಿ ಹೋಗಿದ್ದರಿಂದ ಬಾಗಿನ ಅರ್ಪಣೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಬೆಳೆಗಳಿಗೆ ನೀರು ಒದಗಿಸಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಮೂರು ರಾಜ್ಯಗಳ ರೈತರಿಗೆ ಅನುಕೂಲವಾಗುವ ಯೋಜನೆ ಇದಾಗಿದ್ದು, ಇನ್ನೂ 20 ಟಿಎಂಸಿ ನೀರು ಬಂದರೆ, ಶೇ.95 ಶೇಖರಣೆಯಾಗುತ್ತದೆ. ರೈತರಿಗೂ ಕೂಡ ನೀರು ಸಿಗುವುದಿಲ್ಲ ಎಂಬ ಆತಂಕವಿತ್ತು. ಆದರೆ ಕಳಚಿಹೋದ ಗೇಟ್ ದುರಸ್ತಿಗೊಳಿಸಿ ನೀರು ಪೋಲಾಗದಂತೆ ಕ್ರಮ ವಹಿಸಲಾಗಿದ್ದು, ಆದಷ್ಟು ಶೀಘ್ರ ಭರ್ತಿಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

      ಉಪ ಮುಖ್ಯಮಂತ್ರಿಗಳಾದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಅಣೆಕಟ್ಟುಗಳ ಸುರಕ್ಷತೆ ಪರಿಶೀಲನೆಗಾಗಿ ಕೇಂದ್ರ ತಂಡ ಹಾಗೂ ಮಾಜಿ ಸಿಡ್ಬ್ಲೂ ಸಿ ಸದಸ್ಯರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳನ್ನು ಪರಿಶೀಲಿಸಲು ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ ಎಂದು ಹೇಳಿದರು.

      ಸಮಿತಿಯ ವರದಿಯ ಆದಾರದ ಮೇಲೆ ಅಣೆಕಟ್ಟುಗಳ ಸುರಕ್ಷತೆಗೆ ಸರ್ಕಾರ ಕೆಲಸ ಮಾಡಲಿದೆ. ನಾರಾಯಣಪುರ ಅಣೆಕಟ್ಟಿನ ಗೇಟುಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಳವಡಿಸಲಾಗಿದೆ ಎಂದು ತಿಳಿಸಿದರು.

      ಗಂಗಾ ಆರತಿ ಮಾದರಿಯಲ್ಲಿ ಕೃμÁ್ಣ ಆರತಿ ಕಾರ್ಯಕ್ರಮ ನಡೆಸಬೇಕು ಎಂದು ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಮತ್ತು ಆರ್.ಬಿ.ತಿಮ್ಮಾಪುರ ಅವರು ಸೇರಿದಂತೆ ಶಾಸಕರು ಮನವಿ ಮಾಡಿದ್ದಾರೆ. ತುಂಗಾ ಆರತಿ ಈಗಾಗಲೇ ನಡೆಯುತ್ತಿದೆ. ಕಾವೇರಿ ಆರತಿ ನಡೆಸಲು ಸಮಿತಿ ರಚನೆ ಮಾಡಲಾಗಿದೆ. ಅದೇ ರೀತಿ ಕೃμÁ್ಣ ಆರತಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ಆಲಮಟ್ಟಿ ಆಣೆಕಟ್ಟಿನ ಉದ್ಯಾನವನ ಉತ್ತಮವಾಗಿದೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
      ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ಭೂಮಿ ಕಳೆದು ಕೊಂಡವರು ಹಾಗೂ ಭೂಸ್ವಾಧೀನ ವಿಚಾರವಾಗಿ ಈ ಭಾಗದ ಮೂರು ಜನ ಮಂತ್ರಿಗಳು ಹಾಗೂ ಶಾಸಕರು ಪ್ರಸ್ತಾವನೆ ಮಾಡಿದ್ದಾರೆ. ಎಲ್ಲರ ಬಳಿ ಯಾವ, ಕೆಲಸಗಳನ್ನು ಮಾಡಬಹುದು ಎಂದು ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಭೂಮಿ ಕಳೆದುಕೊಂಡಿರುವ ಸಂತ್ರಸ್ತರ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು, ಕಾನೂನು ಚೌಕಟ್ಟಿನಲ್ಲಿ ಯಾವ ರೀತಿಯ ಪರಿಹಾರ ನೀಡಬಹುದು ಎಂಬುದರ ಕುರಿತು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

      ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ ಮಾರ್ಜಕ್ ನಿಗಮದ ಅಧ್ಯಕ್ಷರಾದ ಶಾಸಕ ಸಿ.ಎಸ್.ನಾಡಗೌಡ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ,ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ ಸೇರಿದಂತೆ ಉಭಯ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

      Tags: #CM Siddaramay#Ganga Puja-Bag offering to Alamati Reservoir Urge the central government to issue a notification for the height of Alamatt - Chief Minister Shri Siddaramaiah#Public News#ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ ಆಲಮಟ್ಟಿ ಎತ್ತರಕ್ಕೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ -ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯDkcvijayapur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      August 26, 2025
      ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!

      ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!

      August 26, 2025
      ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

      ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

      August 26, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.