ಭೀಮಾ ನದಿ ಪಾತ್ರದ ಗ್ರಾಮಗಳಿಗೆ ಶಾಸಕರ ಭೇಟಿ
ಇಂಡಿ : ತಾಲೂಕಿನ ಭೀಮಾನದಿ ಪಾತ್ರದ ಗ್ರಾಮಗಳಿಗೆ ಶಾಸಕ ಯಶವಂತ್ರಾಯಗೌಡ ಪಾಟೀಲ ಅಧಿಕಾರಿಗಳ ತಂಡದೊAದಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಲ್ಲಿನ ಹಲವು ರೈತರು ಮಹಾರಾಷ್ಟçದಿಂದ ನೀರು ಹರಿಬಿಟ್ಟ ಕಾರಣ ನದಿ ಪಾತ್ರದ ಜಮೀನಿನಲ್ಲಿ ನೀರುನುಗ್ಗಿದ್ದು ಬೆಳೆ ನೀರಿನಲ್ಲಿ ಮುಳುಗಿ ಹಾನಿಯಾಗಿದೆ ಎಂದು ಶಾಸಕರ ಗಮನಕ್ಕೆ ತರುತ್ತಿದ್ದಂತೆರ ಸ್ಥಳದಲ್ಲೇ ಇದ್ದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಹಾಗೂ ತಹಸೀಲ್ದಾರ ಬಿ.ಎಸ್. ಕಡಕಭಾವಿ ಅವರಿಗೆ ಈ ಕುರಿತು ಕೂಡಲೆ ತೋಟಗಾರಿಕೆ, ಕೃಷಿ ಇಲಾಖೆಯ ಸಹಯೋಗದಲ್ಲಿ ಸರ್ವೇ ನಡೆಸಿ ಯಾವ ರೈತರ ಎಷ್ಟು ಮೌಲ್ಯದ ಬೆಳೆ ಹಾನಿಯಾಗಿವೆ ಎಂಬುದರ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.
ಪ್ರವಾಹ ಬಂದರೆ ಜನರಿಗೆ ತೊಂದರೆಯಾಗದAತೆ ಏನು ಕ್ರಮ ಕೈಗೊಂಡಿದ್ದೀರಿ… ಜನರಿಗೆ ಈ ಕುರಿತು ಎಚ್ಚರಿಕೆಯಿಂದ ಇರಲು ತಿಳಿಸಿದ್ದೀರಿಯೇ ಎಂದು ಪ್ರಶ್ನಿಸಲಾಗಿ, ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಎಚ್ಚರದಿಂದಿರಲು ಡಂಗೂರ ಸಾರಲಾಗಿದೆ. ಗ್ರಾಮಲೆಕ್ಕಾಧಿಕಾರಿಗಳು, ಪಿಡಿಓ ಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಗುಂಪು ಮಾಡಿ, ನೋಡೆಲ್ ಅಧಿಕಾರಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾರಾಷ್ಟçದ ಜಿಲ್ಲಾಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದು ಅವರು ಯಾವಾಗ ಎಷ್ಟು ನೀರು ಬಿಡುತ್ತಾರೆ ಎಂಬ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಂಡು ನದಿ ಪಾತ್ರದ ಜನತೆಯ ಬಗ್ಗೆ ಕಾಳಜಿವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಚಿಕ್ಕಮಣೂರ, ಅಗರಖೇಡ, ಗುಬ್ಬೇವಾಡ, ಬರಗುಡಿ, ಹಿಂಗಣ ಗ್ರಾಮಗಳಿಗೆ ಭೇಟಿ ನೀಡಿದರು.
ಡಿವೈಎಸ್‌ಪಿ ಜಗದೀಶ. ಹೆಚ್, ಗ್ರಾಮೀಣ ಠಾಣಾ ಪಿಎಸ್‌ಐ ಸೋಮೇಶ ಗೆಜ್ಜಿ, ಮಹಾದೇವಪ್ಪ ಏವೂರ, ಹೆಚ್.ಎಸ್. ಪಾಟೀಲ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಪಿಡಿಓಗಳು, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ಸ್ಥಳೀಯರಾದ ವಿಠ್ಠಲಗೌಡ ಪಾಟೀಲ, ಹುಚ್ಚಪ್ಪ ತಳವಾರ, ಸಿದ್ದಾರೂಢ ಮರಗೂರ ಮತ್ತಿತರರಿದ್ದರು.
ಇಂಡಿ: ಭೀಮಾನದಿ ಪಾತ್ರದ ಅಗರಖೇಡ ಗ್ರಾಮಕ್ಕೆ ಶಾಸಕ ಯಶವಂತ್ರಾಯಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.