ಕುಡಿಯುವ ನೀರಿನ ಬಳಕೆ ಮತ್ತು ಮಹತ್ವ ಅಗತ್ಯ
ಇಂಡಿ : ನೀರು ಅತ್ಯ ಅಮೂಲ್ಯ , ನೀರು ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ ,ಕುಡಿಯುವ ನೀರಿನ ಮಹತ್ವ ಮತ್ತು ಸದ್ಬಳಕೆ ಅಗತ್ಯ, ಪ್ರತಿಯೊಬ್ಬರೂ ನೆಲ -ಜಲ, ಅಂತರ್ಜಲ ಹೆಚ್ಚಳ ಮತ್ತು ಮಳೆನೀರು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಉಳಿಕೆ, ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದು ವಿಜಯಪೂರ ಜಿಲ್ಲೆಯ ನೀರು ಉಳಿಸಿ ಕಾರ್ಯಕ್ರಮ ಜಿಲ್ಲಾ ಸಂಯೋಜಕರಾದ ಹಣಮಂತ ಪಟವಾದಿ ಹೇಳಿದರು.
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೇಶ್ವರ ಮಠದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್. ಇಂಡಿ ತಾಲೂಕು ಘಟಕ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ದಾವಣಗೆರೆ ಕಲಾ ತಂಡದಿಂದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿಯಲ್ಲಿ ಅಂತರ್ಜಲ ಕ್ಷೀಣ ಸಿದಂತೆ ದಿನೇ ದಿನೇ ನೀರಿನ ಸಮಸ್ಯೆ ಉಂಟಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ದಿಸೆಯಲ್ಲಿ ನೀರಿನ ಸಮಸ್ಯೆಯನ್ನು ಮನಗಂಡು ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಲು ಜನರಲ್ಲಿ ಪ್ರಜ್ಞೆ ಮೂಡಬೆಕಿದೆ ಎಂದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜೈಯಶ್ರೀ, ವಲಯದ ಮೇಲ್ವಿಚಾರಿಕಿ ಅಶ್ವಿನಿ ಸಂಗೊಳ್ಳಿ, ಉಪಸ್ಥಿತರಿದ್ದರು ,ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ವೇದಮೂರ್ತಿ ಕೆಂಪಯ್ಯ ಹಿರೇಮಠ, ಹಾಗೂ ತಡವಲಗಾ ಗ್ರಾಪಂ ಸದಸ್ಯೆ ಶ್ರೀಮತಿ ಚನ್ನಮ್ಮ ಗುಡ್ಲಮನಿ, ಜ್ಯೋತಿ ಬಡಿಗೇರ, ಜ್ಯೋತಿ ಇಂಡಿ, ದಾನಮ್ಮ ಬಡಿಗೇರ, ಸೇರಿದಂತೆ ತಡವಲಗಾ ಗ್ರಾಮದ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ದಾವಣಗೆರೆ ಕಲಾ ತಂಡದಿಂದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಪಟವಾಡಿ ಮಾತನಾಡಿದರು.