ಇಂಡಿ: ಯುವಕನೋರ್ವ ಕಾಲು ಜಾರಿ, ಕಾಲುವೆಯಲ್ಲಿ ಬಿದ್ದು ಮೃತಪಟ್ಟ ದುರ್ಘಟನೆ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಹತ್ತಿರ ನಡೆದಿದೆ.
ಮೃತನನ್ನು ಹಿರೇರೂಗಿ ಗ್ರಾಮದ ೨೮ ವರ್ಷದ ಯುವಕ ಮಹಾದೇವ ಶರಣಪ್ಪ ಮುಂಡೋಡಗಿ ಎಂದು ಗುರುತಿಸಲಾಗಿದೆ. ನಿ ಹಿರೇಮಸಳಿ ಗ್ರಾಮದ ಹತ್ತಿರ ಇರುವ ಮುಖ್ಯ ಕಾಲುವೆ (ಐಬಿಸಿ) ಕಾಲುವೆಯಿಂದ ತನ್ನ ಹೊಲಗದ್ದೆಗೆ ನೀರುಣ ಸಲು ಮೋಟಾರು ಮೂಲಕ ನೀರು ಹರಿಸುವ ಸಲುವಾಗಿ ಕಾಲುವೆಗೆ ತೆರಳಿದ್ದ, ಈ ಸಂದರ್ಭದಲ್ಲಿ ಆಯತಪ್ಪಿ ಕಾಲುವೆಯಲ್ಲಿ ಬಿದ್ದಿದ್ದು ತಲೆಗೆ ¥ಟ್ಟಾಗಿ ಮೃತನಾಗಿದ್ದಾನೆ.
ಆತನ ಶೊಧಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















