ಅರಣ್ಯ ಇಲಾಖೆಯಿಂದ 47 ಸಾವಿರ ಸಸಿ ವಿತರಣೆ
ಇಂಡಿ : ತಾಲೂಕಿನ ಬಬಲಾದ ಸಸ್ಯಕ್ಷೇತ್ರದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ 47 ಸಾವಿರ ಸಸಿಗಳನ್ನು ವಿತರಿಸಲಾಗುವದೆಂದು ವಲಯ ಅರಣ್ಯ ಆಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.
ಪಟ್ಟಣದ ಸಾಮಾಜಿಕ ಅರಣ್ಯ ಕೇಂದ್ರ ಕಚೇರಿಯಲ್ಲಿ
ಮಾತನಾಡಿದ ಅವರು ಜೂ.3 ರಿಂದ ರೈತರಿಗೆ,
ಸಂಘ-ಸಂಸ್ಥೆಗಳಿಗೆ,ಶಾಲಾ ಕಾಲೇಜುಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಸಿಗಳನ್ನು ವಿತರಿಸಲಾಗುವದು.
ಸಸಿಗಳು 6*9 ಮತ್ತು 8* 12 ಬ್ಯಾಗ್ ಸೈಜ್ ನಲ್ಲಿ
ವಿತರಿಸಲಾಗುವದು. 6*9 ಬ್ಯಾಗ ಸೈಜ್ ಗೆ ದರ ರೂ 3
ರೂ ಮತ್ತು 8*12 ಬ್ಯಾಗ ಸೈಜ್ ಗೆ ದರ ರೂ 6 ರೂ
ನಿಗದಿಪಡಿಸಲಾಗಿದೆ ಎಂದರು. ನುಗ್ಗೆ, ಸಾಗವಾನಿ, ಮಹಾಗನಿ, ತಪಸಿ, ಹುಣಸೆ, ಸಸಿಗಳು 6*9 ಬ್ಯಾಗ ಸೈಜಿನಲ್ಲಿ ಮತ್ತು ಮಹಾಗನಿ, ಸಾಗವಾನಿ, ಹುಣಸೆ, ಬದಾಮ, ಮೆಹಂದಿ, ಶ್ರೀಗಂಧ, ರಕ್ತ ಚಂದನ, ಬಾರೆ, ಪೆರು,
ನಿಂಬೆ, ನುಗ್ಗೆ 8*12 ಬ್ಯಾಗ ಸೈಜ್ ನಲ್ಲಿ ದೊರೆಯುತ್ತವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೋರ್ತಿ ಶಾಖೆಯ ಉಪ
ವಲಯ ಅರಣ್ಯಾಧಿಕಾರಿ ಎಲ್.ಜಿ.ನಾದ, ಗಸ್ತು ವನ
ಪಾಲಕ ಡಿ.ಎ.ಮುಜಗೊಂಡ, ಇಂಡಿ ಉಪ ವಲಯ
ಅರಣ್ಯಾಧಿಕಾರಿ ರಾಜೇಂದ್ರ ಹುನ್ನುರ, ನಾಗೇಶ
ಬಿರಾದಾರ, ಕಲ್ಲಪ್ಪ ಹರಿಜನ ಮತ್ತಿತರಿದ್ದರು.