ಇಂಡಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಡೆಟ್ ಬಾರ್ ಆಗಿರುವ ಪದಾರ್ಥಗಳ ವಿತರಣೆ..
ಇಂಡಿಯಲ್ಲಿ ಡೆಟ್ ಡಿಬಾರ್ ಆಗಿರುವ ಪದಾರ್ಥಗಳ ವಿತರಣೆ..! ಎಲ್ಲಿ ಗೊತ್ತಾ..?
ಇಂಡಿ : ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೋಷಕರಿಗೆ ನೀಡುತ್ತಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಶಿಶು ಅಭಿವೃದ್ಧಿ ಯೋಜನೆ ಇಂಡಿಯವರು ಮಕ್ಕಳ ಪೋಷಕರಿಗೆ ಕಳಪೆ ಗುಣಮಟ್ಟದ ಬೆಲ್ಲ, ಖಾರದ ಪುಡಿ, ದವಸ ಧಾನ್ಯಗಳು ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ, ಪಾಕೇಟ್ ಮೇಲಿನ ದಿನಾಂಕ ಅಲಿಸಿಹಾಕಿ ಡೆಟ್ ಬಾರ್‌ಯಾಗಿರುವ ಪದಾರ್ಥಗಳನ್ನು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.