ಇಂಡಿಯಲ್ಲಿ ಅನ್ಯಕೋಮಿನ ಯುವಕನ ವಿರುದ್ಧ ಪುಕ್ಸೊ ಪ್ರಕರಣ ದಾಖಲು..!
ಇಂಡಿ : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಅನ್ಯಕೋಮಿನ ಯುವಕ ಸೋಹೇಲ್ ಹೊನಮುರಗಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪ್ರಾಪ್ತೆಯನ್ನು ಪುಸಲಾಯಿಸಿ ಮಹಾರಾಷ್ಟ್ರಕ್ಕೆ
13-05-2024 ಕರೆದುಕೊಂಡು ಹೋಗಿ 17-05-2024 ವಿಜಯಪುರ ಜಿಲ್ಲೆಗೆ ಸೋಹೇಲ್ ಬಿಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿ ಸೋಹೇಲ್ ವಿರುದ್ಧ ಕಲಂ 366, 376(2) (ಐ), ಐಪಿಸಿ & 4, 6, 12, pocso act 2012 ಅಡಿಯಲ್ಲಿ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.