ಲೋಕ ಸಭೆ ಚುನಾವಣೆ 2024 : ವಿದ್ಯುನ್ಮಾನ ಯಂತ್ರ
ಇಂಡಿಗೆ
ಇಂಡಿ : ವಿಜಯಪುರದಿಂದ ಇಂಡಿ ಪಟ್ಟಣದ ಆದರ್ಶ
ಮಹಾವಿದ್ಯಾಲಯದ ಭದ್ರತಾ ಕೋಣೆಗೆ ಲೋಕ
ಸಭಾ ಚುನಾವಣೆ ನಿಮಿತ್ಯ ವಿದ್ಯುನ್ಮಾನ
ಯಂತ್ರಗಳನ್ನು ಇಂಡಿಗೆ ತರಲಾಯಿತು ಎಂದು
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ
ತಿಳಿಸಿದ್ದಾರೆ.
337 ಕಂಟ್ರೋಲ ಯುನಿಟ್ ಮತಯಂತ್ರಗಳು,
337 ಬ್ಯಾಲೆಟ್ ಯುನಿಟ್ ಮತಯಂತ್ರಗಳು
ಮತ್ತು 359 ವಿವಿ ಪ್ಯಾಡಗಳು ಇಂಡಿಗೆ ಬಿಗಿ ಭದ್ರತೆ
ಮಧ್ಯೆ ತರಲಾಗಿದೆ. ನಾಮ ಪತ್ರ ಪ್ರಕ್ರಿಯೆ ಮುಗಿದ ನಂತರ ಇಂಡಿಯಲ್ಲಿಯೇ ಮತಯಂತ್ರಗಳಲ್ಲಿ ಬ್ಯಾಲೇಟ್
ಪೇಪರ ವ್ಯವಸ್ಥೆ ಮಾಡಲಾಗಿದೆ ಎಂದು ಗದ್ಯಾಳ
ತಿಳಿಸಿದರು.
ತಹಸೀಲ್ದಾರ ಮಂಜುಳಾ ನಾಯಕ, ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ ಮತ್ತು ಚುನಾವಣೆ ಸಿಬ್ಬಂದಿ ಮತ್ತು ಪೋಲಿಸ ಸಿಬ್ಬಂದಿ ಇದ್ದರು.
ಇಂಡಿಗೆ ಬಂದ ಮತ ಯಂತ್ರಗಳನ್ನು ಆದರ್ಶ
ವಿದ್ಯಾಲಯದ ಭದ್ರತಾ ಕೋಣೆಗೆ
ಸಾಗಿಸುತ್ತಿರುವದು.