ರೋಗ ನಿರ್ಮೂಲನೆಗೆ 5 ವರ್ಷದೊಳಗಿನವರಿಗೆ
ಲಸಿಕೆ |
ತಾಲೂಕಿನಲ್ಲಿ 264 ಕೇಂದ್ರಗಳಲ್ಲಿ ಲಸಿಕೆ
61629 ಮಕ್ಕಳಿಗೆ ಪೋಲಿಯೋ ಹನಿ
ಇಂಡಿ : ಪಲ್ಸ ಪೋಲಿಯೊ ಅಭಿಯಾನವನ್ನು ಈ ವರ್ಷ
ಪುನಾರಂಭಿಸಲಾಗುತ್ತಿದ್ದು ತಾಲೂಕಿನಲ್ಲಿ ಮಾರ್ಚ
3 ರಿಂದ 4 ದಿನಗಳ ಕಾಲ ನಡೆಯಲಿದೆ. 5
ವರ್ಷದೊಳಗಿನ 61629 ಕ್ಕೂ ಹೆಚ್ಚು ಮಕ್ಕಳಿಗೆ
ಪೊಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು
ತಾಲೂಕಾ ಅಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದರು.
ಅವರು ತಾಲೂಕಿನ ವಿವಿಧ ಕಡೆ ಪಲ್ಸ ಪೋಲಿಯೊ
ಕಾರ್ಯಕ್ರಮದ ಸಾಮಗ್ರಿ ಕಳುಹಿಸಿವ ಕಾರ್ಯಕ್ಕೆ
ಮತ್ತು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ನಿರಂತರ ಪೊಲಿಯೊ ಲಸಿಕೆ ಅಭಿಯಾನ ನಡೆಸುತ್ತ ಬಂದ ಪರಿಣಾಮ 2018 ರಲ್ಲಿ ಭಾರತ ಪೊಲಿಯೊ ಮುಕ್ತ ರಾಷ್ಟ್ರ ಎಂದು ವಿಶ್ವ ಆ ರೋಗ್ಯ ಸಂಸ್ಥೆ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ತಾಲೂಕಿನಲ್ಲಿ ಪೊಲಿಯೊ ಹನಿ ಹಾಕಿರಲಿಲ್ಲ. ಈ ವರ್ಷ ತಾಲೂಕಿನಾದಂತ ಪಲ್ಸ ಪೋಲಿಯೊ
ಹಮ್ಮಿಕೊಳ್ಳಲಾಗಿದೆ ಎಂದರು.
ಪಲ್ಸ ಪೊಲಿಯೊ ಅಭಿಯಾನ ಯಶಸ್ವಿಯಾಗಿ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ಕೈಕೊಂಡಿದೆ. ತಾಲೂಕಿನಲ್ಲಿ ಇಂಡಿಯ ಸಾರ್ವಜನಿಕ ಕೇಂದ್ರ ಸೇರಿದಂತೆ ತಾಲೂಕಿನ ಎಲ್ಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ ಕಚೇರಿ, ಶಾಲೆ, ಅಂಗನವಾಡಿ ಕೇಂದ್ರಗಳು, ದೇವಸ್ಥಾನಗಳಲ್ಲಿ ಪೊಲಿಯೊ ಹಾಕಲಾಗುತ್ತಿದೆ.
ಇಂಡಿ ತಾಲೂಕಿನ ಜನಸಂಖ್ಯೆ ಐದು ಲಕ್ಷ 7824 ಇದ್ದು
ಒಟ್ಟು 264 ಕೇಂದ್ರಗಳಲ್ಲಿ ಪೊಲಿಯೊ ಲಸಿಕೆ
ಹಾಕಲಾಗುತ್ತಿದೆ. ಐದು ವರ್ಷದ ಒಳಗಿರುವ 61629
ಮಕ್ಕಳನ್ನು ಗುರುತಿಸಿದೆ. ಒಟ್ಟು 528 ಜನರ
ಕಾರ್ಯದಲ್ಲಿ ಪಾಲ್ಗೊಳ್ಳುವರು. 53 ಜನ
ಸುಪರ ವಾಯಿಜರ್ ಇದ್ದು ಒಟ್ಟು ಮನೆಗಳ ಸಂಖ್ಯೆ
89628 ಇದೆ ಎಂದರು. ಪ್ರತಿ ತಂಡದಲ್ಲಿ ತಲಾ ಇಬ್ಬರು ಪೊಲಿಯೊ ಹನಿ ಹಾಕುವ ಸಿಬ್ಬಂದಿ ಮತ್ತು ತಲಾ ಇಬ್ಬರು
ಸಹಾಯಕರು ಇರಲಿದ್ದಾರೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯಲಾಗುತ್ತಿದೆ. ಶಿಕ್ಷಣ, ಸಾರಿಗೆ, ಕಂದಾಯ
ಮೊದಲಾದ ಸರಕಾರಿ ಇಲಾಖೆಗಳಲ್ಲದೆ , ಲಯನ್ಸ
ಸೇರಿದಂತೆ ಅನೇಕ ಸಂಘಟನೆಗಳ ಸಹಯೋಗ
ಪಡೆಯಲಾಗುತ್ತಿದೆ. ಮಾರ್ಚ 3 ರಂದು ಬೂತ್
ಗಳಲ್ಲಿ ಪೊಲಿಯೊ ಹನಿ ನೀಡಲಾಗುತ್ತಿದೆ. ನಗರ
ಪ್ರದೇಶದಲ್ಲಿ 4,5 ಮತ್ತು 6 ರಂದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾರ್ಚ 4 ಮತ್ತು 5 ರಂದು ಮನೆ ಮನೆ ತೆರಳಿ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೊ ಹನಿ ನೀಡಲಾಗುತ್ತಿದೆ ಎಂದರು.
ಇಂಡಿ ಪಟ್ಟಣದ ಕಚೇರಿಯಿಂದ ಪೊಲಿಯೊ ಅಭಿಯಾನದ ಸಾಮಗ್ರಿ ಮತ್ತು ಪ್ರಚಾರ ಸಾಮಗ್ರಿ
ಹೋಗುತ್ತಿರುವ ಚಿತ್ರ.