ಫೆ.16ಕ್ಕೆ ಬಜೆಟ್ ಮಂಡನೆ
ಬೆಂಗಳೂರು : ಫೆ.16ರಂದು ಸಿಎಂ ಅವರು ಬಜೆಟ್ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಖಾದರ್ ಅವರು ವಿವರಿಸಿದರು. 12ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆದು ತದನಂತರ ನೀರ್ಣಯ ಅಂಗೀಕಾರ ವಾಗಲಿದೆ. ರಾಜ್ಯಪಾಲರ ಭಾಷಣದ ನಂತರ 16ನೇ ವಿಧಾನಸಭೆಯ 02ನೇ ಅಧಿವೇಶನ ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿದ ಗಣ್ಯ ವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯಗಳನ್ನು ಮಂಡಿಸಲಾಗುವುದು ಎಂದರು.
ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸ ಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. 10 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ 8 ದಿನಗಳ ಕಾಲ ಪ್ರಶೋತ್ತರ ಕಲಾಪಗಳನ್ನ ನಿಗದಿಪಡಿ ಸಲಾಗಿದೆ. ಇದರ ಜೊತೆಗೆ ಗಮನಸೆಳೆಯುವ ಸೂಚನೆ ಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯ ಕಲಾಪಗಳನ್ನು ನಡೆಸಲಾಗುವುದು ಎಂದರು.
ಶಾಸಕರು,ಮಾಧ್ಯಮ ಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳಿಗಾಗಿ ವಿಧಾನಸಭೆಯ ಸಭಾಂಗಣ ದಲ್ಲಿದ್ದ ಕ್ಯಾಂಟೀನ್ ಸೌಲಭ್ಯವನ್ನು ಈ ಹಿಂದಿನಂತೆ ವಿಧಾನಸೌಧದ ಮೊದಲನೇ ಮಹಡಿಯ ಪೂರ್ವ ಭಾಗದಲ್ಲಿರುವ ಸೆಂಟ್ರಲ್ ಹಾಲ್‌ನಲ್ಲಿ ವ್ಯವಸ್ಥೆಗೊಳಿಸ ಲಾಗಿದೆ. ಸದನದಲ್ಲಿ ಉತ್ತರಿಸಲಾಗುವ ಪ್ರಶ್ನೆಗಳು, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಇತ್ಯಾದಿ ಸೂಚನೆಗಳನ್ನು ಸರಕಾರದವರು ನೀಡುವ ಲಿಖಿತ
ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಮಾನ್ಯ ಸಂಸದರಿಗೆ ಹಾಗೂ ಪತ್ರಕರ್ತರಿಗೆ ಇ-ಮೇಲ್ ಮುಖಾಂತರ ಕಳುಹಿಸುವ ವ್ಯವಸ್ಥೆ ಮಾಡಲಾಗು ವುದು. ಪತ್ರಕರ್ತರಿಗೆ ವಾರ್ತಾ ಇಲಾಖೆಯ ಮುಖಾಂ ತರ ಇ-ಮೇಲ್ ಕಳುಹಿಸಲಾಗುವುದು. ಅಲ್ಲದೇ ಸಚಿವಾಲಯದ ವೆಬ್‌ಸೈಟಿನಲ್ಲಿಯೂ ದೊರೆಯುತ್ತದೆ ಎಂದರು.
ಶಾಸಕರಿಗೆ ವೈವಿಧ್ಯಮಯ ಭೋಜನ: ಅಧಿವೇಶನ ಆರಂಭವಾದಾಗಿನಿಂದ ಮುಕ್ತಾಯವಾಗುವವರೆಗೆ 10 ದಿನಗಳ ಕಾಲ ಬೆಳಗ್ಗೆ 8ರಿಂದ 9ರವರೆಗೆ ಸದನದ ಸದಸ್ಯರಿಗೆ ಲಘು ಉಪಹಾರ ಮತ್ತು ನಿತ್ಯ ಮಧ್ಯಾಹ್ನ ಬೆಂಗಳೂರಿನ ವಿವಿಧ ಹೋಟಲ್‌ಗಳ ವೈವಿಧ್ಯಮಯ ವಾದ ರುಚಿಕರ, ಆರೋಗ್ಯಪೂರ್ಣವಾದ ಭೋಜನ ದ ವ್ಯವಸ್ಥೆಯನ್ನ ಮಾಡಲಾಗುತ್ತಿದೆ ಎಂದು ಸ್ಪೀಕರ್ ಖಾದರ್ ಅವರು ವಿವರಿಸಿದರು. ಭದ್ರತೆಯನ್ನು ಇನ್ನಷ್ಟು ಉತ್ತಮಗೊಳಿಸಲು ವ್ಯವಸ್ಥೆ ಮಾಡಲಾಗು ವುದು ಎಂದರು. ಮಾಧ್ಯಮದವರು ಅತ್ಯುತ್ತಮ ವಿಷಯಗಳ ಕುರಿತು ಬೆಳಕು ಚೆಲ್ಲಿ ಸದನದ ಕಲಾಪಕ್ಕೆ ಮೆರಗು ನೀಡಬೇಕು ಎಂದು ಅವರು ಹೇಳಿದರು