ಇಂದು ಸಿಂದಗಿಯಲ್ಲಿ ಇಂಡಿ ಪ್ರತ್ಯೇಕ ಜಿಲ್ಲಾ ಕೇಂದ್ರ ಸೃಜಿಸುವ ಅಭಿಪ್ರಾಯ ಸಂಗ್ರಹಣೆ..!
ಸಿಂದಗಿ: ಇಂಡಿ ಪ್ರತ್ಯೇಕ ಜಿಲ್ಲಾ ಕೇಂದ್ರ ಸೃಜೀಸುವ ಹಿನ್ನೆಲೆ ಯಲ್ಲಿ ಇಂಡಿ ಉಪವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿ.29ರಂದು ಸಾಯಂಕಾಲ 5ಗಂಟೆಗೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ಅಭಿಪ್ರಾಯ ಸಂಗ್ರಹಣೆಗಾಗಿ ಸಭೆ ಕರೆಯಲಾಗಿದೆ. ಹಾಗಾಗಿ ತಾಲೂಕಿನ ಜನಪ್ರತಿನಿದಿಗಳು, ಗಣ್ಯರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮಾಧ್ಯಮ ಮಿತ್ರರು ಸದರಿ ಸಭೆಗೆ ಹಾಜರಿರಬೇಕು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.