ಲಿಂಬೆನಾಡಿನಲ್ಲಿ ನ- 9 ರಂದು ಹಡಪದ ಅಪ್ಪಣ್ಣ ಕಂಚಿನ ಮೂರ್ತಿ ಅನಾವರಣ..
ಇಂಡಿ: ನವೆಂಬರ್ 9 ಗುರುವಾರರಂದು ಹಡಪದ
ಅಪ್ಪಣ್ಣನವರ ಕಂಚಿನ ಮೂರ್ತಿಯ ಉದ್ಘಾಟನೆ ಮತ್ತು ಇಂಡಿ ತಾಲೂಕ ಹಡಪದ ಅಪ್ಪಣ್ಣನವರ ಸಮಾಜದ ಜನಜಾಗೃತಿಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಸಿದ್ದು ನಾವಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಿಗ್ಗೆ 9:00 ಘಂಟೆಗೆ ಶಿವಾಜಿ ಮಹಾರಾಜರ ವೃತ್ತದಿಂದ ಕುಂಭಮೇಳ ಪ್ರಾರಂಭವಾಗಿ ಹಡಪದ ಅಪ್ಪಣ್ಣನವರ ವೃತ್ತದ ವರೆಗೆ ಆಗಮಿಸಿ ತದನಂತರ 11:00 ಘಂಟೆಗೆ ಪಟ್ಟಣದ ಪೆÇಲೀಸ್ ಪರೇಡ್ ಮೈದಾನದಲ್ಲಿ
ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರದ ಮಾಜಿ
ಸಚಿವ ಎಂ. ವೀರಪ್ಪ ಮೊಯ್ಲಿ ಅವರು ನೆರವೇರಿಸಲಿದ್ದು
ಅಧ್ಯಕ್ಷತೆಯನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ವಹಿಸಲಿದ್ದಾರೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ತಂಗಡಗಿಯ ಪೂಜ್ಯ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು,ಸಾನಿಧ್ಯವನ್ನು ಕಾತ್ರಾಳ. ಬಾಲಗಾಂವ ಮಠದ ಅಮೃತಾನಂದ ಸ್ವಾಮಿಗಳು, ಕಕ್ಕಮರಿ ಗುರುದೇವ ಆಶ್ರಮದ ಆತ್ಮರಾಮ ಮಹಾಸ್ವಾಮೀಜಿಗಳು, ಇಂಡಿ ಓಂಕಾರಾಶ್ರಮದ ಸ್ವರೂಪಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿಜಯಪುರ
ಸಂಸದ ರಮೇಶ ಜಿಗಿಜಿಣಗಿ, ವಿಜಯಪುರ ನಗರ ಶಾಸಕ
ಬಸನಗೌಡ ಪಾಟೀಲ್ ಯತ್ನಾಳ್, ನಾಗಠಾಣ ಶಾಸಕ ವಿಠಲ ಕಟಕಧೋಂಡ, ಹಡಪದ ಸಮಾಜದ ರಾಜ್ಯಾಧ್ಯಕ್ಷ
ಸಿದ್ದಣ್ಣ ಹಡಪದ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಮಾಜದ ಅಧ್ಯಕ್ಷ ಸಿದ್ದು ನಾವಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ನಾವಿ, ಶಿವಾನಂದ ನಾವಿ, ಸಂತೋಷ ಗೌಳಿ, ನಟರಾಜ ಗೌಳಿ, ಧೂಳಣ್ಣ ನಾವಿ, ಪ್ರಶಾಂತ ಕಟ್ಟಿ, ಹಣಮಂತ ಭಾವಿಕಟ್ಟಿ, ಬಾಳು ಗವಳಿ, ಗಡ್ಡೆಪ್ಪ ನಾವಿ ಸೇರಿದಂತೆ ಇನ್ನಿತರರು ಇದ್ದರು.