ನೇಕಾರರಿಗೆ ಬಂಪರ್ ಗಿಪ್ಟ್: ಕಾಂಗ್ರೆಸ್ ಸರಕಾರ
ವಿಜಯಪುರ : ರಾಜ್ಯ ಸರ್ಕಾರ ನೇಕಾರರಿಗೆ ಉಚಿತ ವಿದ್ಯುತ್ ಒದಗಿಸಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರರಿಗೆ 0 ಎಚ್‌ಪಿಯಿಂದ 10 ಎಚ್‌ಪಿ ವರೆಗೂ ಉಚಿತವಾಗಿ 250 ಯುನಿಟ್ ವಿದ್ಯುತ್ ನೀಡಲಾಗುವುದು ಎಂದರು. ಈಗಾಗಲೇ ಸರ್ಕಾರದಿಂದ ಅಧೀಕೃತ ಆದೇಶವಾಗಿದೆ. ಇನ್ನು ನೇಕಾರರು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಈ ಆದೇಶ ಮಾಡಿದೆ. ಅದಕ್ಕಾಗಿ ನೇಕಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೇ, ಆದೇಶ ಹೊರಡಿಸಿದ ಸಿಎಂಗೆ ಅಭಿನಂದನೆ. ನೇಕಾರರಿಗೆ ಇದರಿಂದ ದೊಡ್ಡ ಅನುಕೂಲವಾಗಲಿದೆ.
ಚುನಾವಣೆಯಲ್ಲಿ ಘೋಷಣೆ ಮಾಡಿದನ್ನು ಕಾರ್ಯರೂಪಕ್ಕೆ ತಂದಿದ್ದೇವೆ. 35 ರಿಂದ 40 ಸಾವಿರ ಕುಟುಂಬಗಳಿಗೆ ಇದು ಅನುಕೂಲ ಆಗುತ್ತದೆ. 120 ರಿಂದ 140 ಕೋಟಿ ಇದಕ್ಕೆ ಒಂದು ವೆಚ್ಚ ತಗಲುತ್ತದೆ. ನವೆಂಬರ್ 20 ಕ್ಕೆ ಸಹಕಾರಿ ಸಪ್ತಾಹ ಜಿಲ್ಲೆಯಲ್ಲಿ ಮಾಡಲಾಗುವುದು. ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿ ವಿಜಯಪುರದಲ್ಲೇ ಪ್ರಧಾನ ಮಾಡಲಾಗುವುದು. ಬರಗಾಲ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ನಿತೀನ ಗಡ್ಕರಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದರು.