ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಅಂತಾರಾಷ್ಟ್ರೀಯ
ಪ್ರಜಾಪ್ರಭುತ್ವ ದಿನದ ನಿಮಿತ್ತ ಭಾರತದ ಸಂವಿಧಾನ
ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮ ಶುಕ್ರವಾರ ಜರುಗಿತು.
ಈ ಸಂದರ್ಭದಲ್ಲಿ ಶಿಕ್ಷಕ ಸಂತೋಷ ಬಂಡೆ ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಓದಿಸಿದರು. ಶಿಕ್ಷಕ ಎಸ್.ಆರ್. ಚಾಳೇಕಾರ ಪ್ರಜಾಪ್ರಭುತ್ವ ದಿನದ ಮಹತ್ವದ ಕುರಿತು ಮಾತನಾಡಿದರು. ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಯುಬಿಎಸ್ ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ, ಕೆಜಿಎಸ್ ಮುಖ್ಯ ಶಿಕ್ಷಕಿ ವ್ಹಿ.ವೈ. ಪತ್ತಾರ, ಶಿಕ್ಷಕ ಎಸ್.ಎಂ. ಪಂಚಮುಖಿ, ಎನ್.ಬಿ. ಚೌಧರಿ, ಎಸ್.ಡಿ. ಬಿರಾದಾರ, ಜೆ.ಎಂ. ಪತಂಗಿ, ಎಸ್.ಬಿ. ಕುಲಕರ್ಣಿ, ಸಾವಿತ್ರಿ
ಸಂಗಮದ, ಜೆ.ಸಿ. ಗುಣಕಿ, ಎಂ.ಎಂ. ಪತ್ತಾರ, ಎಸ್.ಎನ್. ಡಂಗಿ, ಸುರೇಶ ದೊಡ್ಯಾಳಕರ ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ಮಕ್ಕಳು, ಪಾಲಕರು ಭಾಗವಹಿಸಿದ್ದರು.