ಇಂಡಿಯಲ್ಲಿ ಅನಿಧಿಕೃತ್ ಗನ್ ಇಟ್ಟುಕೊಂಡ ಆರೋಪಿಗೆ 1 ವರ್ಷ ಜೈಲು..!
ಇಂಡಿ ಜೆಎಮ್ ಎಫ್ ಸಿ ನ್ಯಾಯಾಲಯ ತೀರ್ಪು..!
ಇಂಡಿ : ಅನಧಿಕೃತ ಗನ್ ಇಟ್ಟುಕೊಂಡಿದ ಆರೋಪಿಗೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದ ಜಗು ಭೂತಾಳಿ ಪೂಜಾರಿ ಶಿಕ್ಷೆಗೊಳಗಾದ ಆರೋಪಿ.
18-10-2010 ರಂದು ಅನಧಿಕೃತವಾಗಿ ಸಿಂಗಲ್ ಬ್ಯಾರಲ್ ಸಣ್ಣ ಗನ್ ಇಟ್ಟುಕೊಂಡು ಝಳಕಿ ಬಸ್ ನಿಲ್ದಾಣದ ಬಳಿ ನಿಂತಿರುವಾಗ ಖಚಿತ ಮಾಹಿತಿ ಆಧರಿಸಿ ಝಳಕಿ ಪೊಲೀಸರು ದಾಳಿಗೈದು ಪ್ರಕರಣ ದಾಖಲು ಮಾಡಿದ್ದರು. ದಾಳಿ ವೇಳೆ ಝಳಕಿ ಪಿಎಸ್ಐ ಗಣಪತಿ ಆರ್‌ಎಲ್ ತನಿಖೆಗೊಂಡು ಕೋರ್ಟ್‌ಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದರು. ಪ್ರಕರಣವನ್ನು ನ್ಯಾಯಾಧೀಶರಾದ ಈಶ್ವರ ಎಸ್.ಎಂ ಅವರು ವಾದ ವಿವಾದ ಆಲಿಸಿ, ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ಇಬ್ರಾಹಿಂ ಗಚ್ಚಿನಮಾಲ್ ವಾದ ಮಂಡಿಸಿದ್ದರು.