ಬಾಗಲಕೋಟ : ಕಬ್ಬು ತುಂಬಿದ ಜೋಡು ಟ್ರ್ಯಾಕ್ಟರ್ ಟ್ರೇಲರ್‌ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಕಬ್ಬಿನ ಲೋಡ್ ಹೊತ್ತಿ ಉರಿದಿರುವ ಘಟನೆ ಬಾಗಲಕೋಟ ಜಿಲ್ಲೆಯ ಜಮಖಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ತುಂಗಳ ಗ್ರಾಮದ ಚಾಲಕ ಸುರೇಶ್ ತುಂಗಳ ಎಂಬುವವರಿಗೆ ಸೇರಿದ ಲಕ್ಷಾಂತರ ಮೌಲ್ಯದ ಕಬ್ಬು ಭಸ್ಮವಾಗಿದೆ. ಇನ್ನು ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅಲ್ಲದೇ, ಬೆಂಕಿ ತಗುಲುತ್ತಿದ್ದಂತೆ ವಾಟರ್ ವಾಶ್‌ಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದು, ವಾಟರ್ ವಾಶ್ ಮೂಲಕ ಬೆಂಕಿ ಶಮನವಾಗಿದೆ.