ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಗರದ ಆಲಮಟ್ಟಿ ರಸ್ತೆ ಪಕ್ಕದ ಬರುವ ವೀರಶೈವ ಲಿಂಗಾಯತ ರುದ್ರಭೂಮಿ ಪಕ್ಕದಲ್ಲಿರುವ ಗಜದಂಡ ಶಿವಾಚಾರ್ಯರ, ಸದ್ಗುರು ಸದಾಶಿವ ಮಹಾರಾಜರ ಮಠದಲ್ಲಿ ಜು. 10ರಂದು 8ನೇ ವರ್ಷದ ಗುರುಪೂರ್ಣಿಮೆ ಕಾರ್ಯಕ್ರಮದ ಅಂಗವಾಗಿ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 5:30ಕ್ಕೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, 8 ಗಂಟೆಗೆ ಕಿಲ್ಲಾದಲ್ಲಿರುವ ಕಾಳಿಕಾದೇವಿ ದೇವಸ್ಥಾನದಿಂದ ಪೂರ್ಣಕುಂಭ ಮೆರವಣಿಗೆ, ಮಧ್ಯಾಹ್ನ 12:30ಕ್ಕೆ ಧರ್ಮಸಭೆ ನಡೆಯಲಿವೆ. ಧರ್ಮಸಭೆ ದಿವ್ಯ ಸಾನ್ನಿಧ್ಯವನ್ನು ಹಿರೂರು ಅನ್ನದಾನೇಶ್ವರ ಮಠದ ಜಯಸಿದ್ದೇಶ್ವರ ಶಿವಾಚಾರ್ಯರು, ಸಾನ್ನಿಧ್ಯವನ್ನು ಸಿದ್ದನಕೊಳ್ಳದ ಕಲಾಪೋಷಕ ಮಠದ ಶಿವಕುಮಾರ ಮಹಾಸ್ವಾಮಿಗಳು, ತಾಳಿಕೋಟೆ-ಮುದ್ದೇಬಿಹಾಳ ಖಾಸತೇಶ್ವರ ಮಠದ ಸಿದ್ದಲಿಂಗ ದೇವರು, ಸರೂರು ಅಗತೀರ್ಥ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು, ಕನ್ನೂರು ಸಿದ್ದಲಿಂಗೇಶ್ವರ ಸಂಸ್ಥಾನಮಠದ ಚಂದ್ರಶೇಖರ ಮಹಾರಾಜರು, ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಸಾಧು ಸಂತರು ವಹಿಸುವರು ಎಂದು ವೀರಶೈವ ಲಿಂಗಾಯತ ಸಮಾಜ, ದೈವಮಂಡಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.