ರಾಯಚೂರು: ಜಿಲ್ಲಾ ಲೀಡ್ ಬ್ಯಾಂಕ್ ವಾರ್ಷಿಕ8,900 ಕೋಟಿ ವಿವಿಧ ವಲಯಗಳಿಗೆ ಸಾಲ ಗುರಿಯ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತ್ ಸಿಇಓ ನೂರ್ ಜಹಾನ್ ಖಾನಂ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ
ಲೀಡ್ ಬ್ಯಾಂಕ್ ವತಿಯಿಂದ ವಾರ್ಷಿಕ ಸಾಲ 2022-
23 ನೇ ಸಾಲಿನ ಕ್ರಿಯೋಜನೆ ಹೊತ್ತಿಗೆ ಬಿಡುಗಡೆ ಮಾಡಿದರು. ಕೃಷಿಗೆ -4,500 ಕೋಟಿ, ಆದ್ಯತಾ
ವಲಯಗಳಾದ ಶಿಕ್ಷಣ, ವಸತಿ ಸೇರಿ ಉಳಿದ
ವಲಯಗಳಿಗೆ 6,900 ಕೋಟಿ ಮತ್ತು ಆದ್ಯಾತೇತರ
ವಲಯಕ್ಕೆ 2000 ಕೋಟಿ ಸಾಲದ ಗುರಿಯನ್ನು ವಿವಿಧ
ಬ್ಯಾಂಕುಗಳು ಇರಿಸಿಕೊಂಡಿದ್ದು, ಫಲಾನುಭವಿಗಳಿಗೆ
ಸಕಾಲಕ್ಕೆ ಸಾಲ ತಲುಪಿಸುವ ಬಗ್ಗೆ ಬ್ಯಾಂಕುಗಳು
ಸಮರ್ಪಕವಾಗಿ ತಲುಪಿಸಬೇಕು ಎಂದು ಸಲಹೆ
ನೀಡಿದರು.
ಈ ಸಂಧರ್ಭದಲ್ಲಿ ಲೀಡ್ ಬ್ಯಾಂಕ್ ಬಾಬು
ಬಳಗಾನೂರು ಸೇರಿ ವಿವಿಧ ಬ್ಯಾಂಕುಗಳ
ವ್ಯವಸ್ಥಪಕರು ಉಪಸ್ಥಿತರಿದ್ದರು.