ಬಾವಿಯಲ್ಲಿ ಬಿದ್ದ 8 ವರ್ಷದ ಬಾಲಕಿಯ ದೇಹ ಪತ್ತೆ..!
ಇಂಡಿ : ಆಟವಾಡಲು ಹೋಗಿ ಬಾವಿಯಲ್ಲಿ ಬಾಲಕಿ ಬಿದ್ದಿದ್ದ ಬಾಲಕಿಯ ಶವ ಮಂಗಳವಾರ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಳಿಯ ಧನಸಿಂಗ್ ( ಮೋನಪ್ಪ ನಗರ) ತಾಂಡಾದಲ್ಲಿ ಈ ಘಟನೆ ಸಂಭವಿಸಿದೆ. ತಾಯಿಯೊಂದಿಗೆ ಕುರಿ ಮೇಯಿಸುವಾಗ ಆಟವಾಡುತ್ತಾ ಬಾವಿಯಲ್ಲಿ 8 ವರ್ಷದ ಅರ್ಚನಾ ರಾಠೋಡ ಬಾವಿಯಲ್ಲಿ ನಿನ್ನೆ ಸಾಯಂಕಾಲ ಬಾವಿಯಲ್ಲಿ ಬಿದ್ದಿದ್ದಳು. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಈ ಸಂದರ್ಭದಲ್ಲಿ ಸ್ಥಳದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಕರ್ನಾಟಕ ಯುವರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ವಿಜಯ ಸುಭಾಷ ರಾಠೋಡ, ಸುನೀಲ ರಾಠೋಡ ,ಕಾರ್ಯದರ್ಶಿ ಆನಂದ ಚವ್ಹಾಣ, ಬಂಜರಾ ಕ್ರಾಸ ಮಾಜಿ ಅಧ್ಯಕ್ಷ ಸಂಜು ಲಕ್ಷ್ಮಣ ರಾಠೋಡ, ಸೇರಿದಂತೆ ಅನೇಕರು ಇದ್ದರು.