ವಿಜಯಪುರ : ಎನ್‌ಡಿಪಿಎಸ್ ಅಡಿಯಲ್ಲಿ ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನಾಶಪಡಿಸಿರುವ ಘಟನೆ ವಿಜಯಪುರ ನಗರದ ಹೊರವಲಯದಲ್ಲಿರುವ ಮಹಾನಗರ ಪಾಲಿಕೆಯ ಕೇಂದ್ರದಲ್ಲಿ ಮಾಡಲಾಯಿತು. 78 NDPS ಕೇಸ್‌ಗಳಲ್ಲಿ 34.32 ಲಕ್ಷ ಮೌಲ್ಯದ 763.39 ಕೆಜಿ ಮಾದಕ ವಸ್ತುಗಳನ್ನು ನಿಯಮಾವಳಿಗಳ ಪ್ರಕಾರ ಎಸ್ಪಿ ಎಚ್‌ಡಿ ಆನಂದಕುಮಾರ ನೇತೃತ್ವದಲ್ಲಿ ನಾಶ ಮಾಡಲಾಯಿತು. ಈ ವೇಳೆಯಲ್ಲಿ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಸೇರಿದಂತೆ ಹಿರಿಯ ಪೊಲೀಸ ಅಧಿಕಾರಿಗಳು ಉಪಸ್ಥಿತರಿದ್ದರು.