ಪೂರ್ವಜರ ತ್ಯಾಗ, ಬಲಿಧಾನದಿಂದ ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ- ಶಾಸಕ
ಯಶವಂತರಾಯಗೌಡ ಪಾಟೀಲ.
ಇಂಡಿ : ಸಾವಿರಾರು ಜನರ ತ್ಯಾಗ ಬಲಿಧಾನ ಫಲವಾಗಿ ಇಂದು ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ. ಪ್ರಾಣದ ಹಂಗು ತೊರೇದು ದಾಸ್ಯದ ಸಂಕೋಲೆಯಿಂದ ದೇಶ ಬಿಡುಗಡೆಗೊಳಿಸಲು ಹೋರಾಟ ಮಾಡಿದ ಎಲ್ಲ ಚೇತನಗಳಿಗೆ ಸ್ಮರಿಸುವ ಪವಿತ್ರ ದಿನ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ಆಯೋಜಿಸಿದ ೭೭ನೇ ಸ್ವಾತಂತ್ರ್ಯ ದಿನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಂಜುಂಡಪ್ಪ ವರದಿಯ ಪ್ರಕಾರ ಈ ಭಾಗ ನೀರಾವರಿಯಿಂದ ವಂಚಿತವಾಗಿದ್ದು ಸಮಗ್ರನೀರಾವರಿಯಾದಾಗ ಮಾತ್ರ ರೈತಾಪಿ ವರ್ಗದ ಬದುಕು ಹಸನಾಗುತ್ತದೆ.
ಅವಳಿ ಜಿಲ್ಲೆಗಳ ರೈತರ ಹಾಗೂ ಸಾರ್ವಜನಿಕರ ಅಮೂಲ್ಯ ಆಸ್ತಿ ಕಳೆದುಕೊಂಡು ೫ ರಿಂದ ೬ ಬೇರೆ
ಜಿಲ್ಲೆಗಳ ಸಂಪೂರ್ಣ ನೀರಾವರಿಗೆ ಅನುಕೂಲ ಕಲ್ಪಿಸಿಕೊಟ್ಟ ವಿಜಯಪೂರ ಹಾಗೂ ಬಾಗಲಕೋಟ ಜಿಲ್ಲೆಯ ಜನತೆ ಹೃದಯವಂತರು, ಈಗ ಅವಳಿ ಜಿಲ್ಲೆಗಳ ನೀರಾವರಿ. ಕುಡಿಯುವ ನೀರು ಅನುಕೂಲಕ್ಕಾಗಿ ಆಲಮಟ್ಟಿ ಜಲಾಶೇಯದ ಎತ್ತರವನ್ನು ೫೧೯ರಿಂದ ೫೨೪ ರವರೆಗೆ ಹೆಚ್ಚಿಸಿ ಈ ಭಾಗಗಳ ಜನರ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಡೇರಿಸಬೇಕು , ಸತತ ೩ ಬಾರಿ ಈ ಭಾಗದ ಜನರ ಆರ್ಶೀವಾದಿಂದ ಶಾಸಕನಾಗಿದ್ದೇನೆ.
ಶ್ರೀರೇವಣಸಿದ್ದೇಶ್ವರ ಯಾತನೀರಾವರಿ ಪ್ರಾಮುಖ್ಯತೆ ನೀಡುವುದರ ಜೊತೆಗೆ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡುತ್ತೇನೆ. ಇಂಡಿ ತಾಲೂಕನ್ನು ಜಿಲ್ಲೆಯಾಗಿ ಮಾಡಲು ಪ್ರಮಾಣಿವಾಗಿ ಶ್ರಮಿಸುತ್ತೇನೆ.
ನಮ್ಮ ಪಕ್ಷ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಸಿಸಿದಂತೆ ೫ ಗ್ಯಾರಂಟಿಗಳನ್ನು ಬದ್ದತೆ ಹೊಂದಿದೆ, ಈಗಾಗಲೇ ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಇನ್ನುಳಿದ
ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತರಲು ನಮ್ಮ ಸರಕಾರ ಪ್ರಯತ್ನಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಧ್ವಜಾರೋಹಣ ನೇರವೇರಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ,
ಡಿವೈಎಸ್ಪಿ ಚಂದ್ರಶೇಖರ ನಂದರಡ್ಡಿ, ತಹಶೀಲ್ದಾರ ನಾಗಯ್ಯಾ ಹಿರೇಮಠ, ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ
ಹಂಗರಗಿ ವೇದಿಕೆಯಲ್ಲಿದ್ದರು. ಪಿ.ಡ.ಡಬ್ಲ್ಯೂ ಡಿ ಅಧಿಕಾರಿ ಹಿರೇಮಠ, ಪಿ.ಆರ್.ಈ.ಡಿ ಅಧಿಕಾರಿ ಎಸ್.ಆರ್ ರುದ್ರವಾಡಿ, ಕೃಷಿ ಅಧಿಕಾರಿ ಮಹಾದೇಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್ ಪಾಟೀಲ, ಲ್ಯಾಂಡ ಆರ್ಮಿ ಇಇ ರಾಜಶೇಖರ ಹೂಗಾರ ತಾಲೂಕಾ ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಪಟ್ಟಣದ ಮುಖಂಡರು ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿ,
ವಿಧ್ಯಾರ್ಥಿನಿಯವರು ಉಪಸ್ಥಿತರಿದ್ದರು.
ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಂದ ದೇಶ ಭಕ್ತಿಗೀತೆಗಳು ಸಾಂಸ್ಕೃತಿಕ
ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ
ಸೇವೆ ಸಲ್ಲಿಸಿದ ಪ್ರತಿಭಾನ್ವಿತರಿಗೆ ತಾಲೂಕಾಡಳಿತ ವತಿಯಿಂದ ಸನ್ಮಾನಿಸಿದರು.