ಶೇ.75ಕ್ಕೆ ಮೀಸಲು ಮಿತಿ ಹೆಚ್ಚಿಸಿ : ಶಾಸಕ ಶಿವಲಿಂಗೆಗೌಡ
ಬೆಳಗಾವಿ: ಶೇ. 75 ರಷ್ಟು ಸ್ಥಳೀಯ ಮತ್ತು ತಾಲ್ಲೂಕಿನ ಮೂಲ ವಿದ್ಯಾರ್ಥಿಗಳಿಗೆ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿ ವಸತಿ ಶಾಲೆಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಶಾಸಕ ಶಿವಲಿಂಗೆಗೌಡ ಒತ್ತಾಯ ಮಾಡಿದರು. ಹೌದು ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಅದೇ ತಾಲೂಕಿನ ಮೂಲ ವಿದ್ಯಾರ್ಥಿಗಳಿಗೆ ಶೇ.60 ಮೀಸಲಾತಿ ನೀಡಲು ಸರ್ಕಾರ ಆದೇಶ ಹೊರಡಿಸಿದ್ದು, ಈ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸಬೇಕೆಂದು ಹೇಳಿದರು. ಪ್ರಶೋತ್ತರ ಕಲಾಪದಲ್ಲಿ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಪರಿಶೀಲಿಸುವುದಾಗಿ ತಿಳಿಸಿದರು.