ಹಿರೇರೂಗಿ ಗ್ರಾಮದಲ್ಲಿ ೭೪ ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ..
ಇಂಡಿ : ತಾಲ್ಲೂಕಿನ ಹಿರೇರೂಗಿ ಗ್ರಾಮ ಪಂಚಾಯತ್ ಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಕುರ್ಚಿ ಟೆಬಲ್ ಜೊತೆಗೆ ಮಕ್ಕಳ ಆಟಿಕೆ ವಿತರಣೆ ಮಾಡುವ ಮೂಲಕ ೭೪ ನೇ ಗಣರಾಜ್ಯೋತ್ಸವದ ಕಾರ್ಯಕ್ರಮ ಆಚರಿಸಲಾಯಿತು.
ಗ್ರಾ.ಪ ಅಧ್ಯಕ್ಷ ರಾಜಶೇಖರ ಡಂಗಿ ಪಂಚಾಯತ್ ಆವರಣದಲ್ಲಿರುವ ಧ್ವಜಾರೋಹಣ ನೆರೆವೆರಿಸಿ ಮಾತನಾಡಿದ ಅವರು, ಒಂದು ವೇಳೆ ಸಂವಿಧಾನ ರಚನೆಯಾಗದಿದ್ದರೆ, ಕಾಯಿದೆ ಕಾನೂನುಗಳು ಇಲ್ಲದಿದ್ದರೆ ನಮ್ಮ ದೇಶದ ಪರಿಸ್ಥಿತಿ ಏನಾಗಿರತ್ತಿತ್ತು ಹೇಳಿ. ಇಂತಹ ಬಲು ದೊಡ್ಡ ಲಿಖಿತ, ಅಲಿಖಿತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ . ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುಬೇಕು. ಇನ್ನೂ ಅವರ ತತ್ವ ಆದರ್ಶದಡಿಯಲ್ಲಿ ನಾವುಲ್ಲರೂ ನಡೆಯೋಣ, ಸಾಗೋಣ ಎಂದು ಹೇಳಿದರು.
ಪ್ರತಿಯೊಬ್ಬರ ಧರ್ಮ, ಜಾತಿಗಾಗಿ, ವ್ಯಯಕ್ತಿಕವಾಗಿ ಹಲವಾರು ಹಬ್ಬಗಳು ಆಚರಣೆ ಮಾಡಲು ಇವೆ. ಅವು ಕೇವಲ ಒಂದು ಸಮುದಾಯಕ್ಕೆ, ಧರ್ಮಕ್ಕೆ ಸಂಬಂಧಪಟ್ಟಂತೆ ಆಚರಣೆ ಮಾಡಲಾಗುತ್ತದೆ. ಆದರೆ ಇಡೀ ದೇಶವೇ ಆಚರಣೆ ಮಾಡುವ ಕುಣಿದು ಕುಪ್ಪಳಿಸುವು ಹಬ್ಬಗಳು ಅಂದರೆ ಅಗಸ್ಟ ೧೫, ಜನವರಿ ೨೬ ಮಾತ್ರ. ಈ ಹಬ್ಬಗಳು ದೇಶದ ೧೩೫ ಕೋಟಿ ಜನರು ಆಚರಿಸುವ ಬಲು ದೊಡ್ಡ ಹಬ್ಬವಾಗಿವೆ. ಇಂತಹ ಹಬ್ಬಗಳನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸುವ ಮೂಲಕ ದೇಶಕ್ಕೆ ಗೌರವ ಸಮರ್ಪಣೆ ಮಾಡಬೇಕು. ತ್ಯಾಗ ಬಲಿದಾನ ಗೈದ ಸ್ವತಂತ್ರ ಹೋರಾಟಗಾರರಿಗೆ, ವೀರ ಯೋಧರನ್ನು ಸ್ಮರಿಸಿಕೊಳ್ಳುಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಬಸವರಾಜ ಬಬಲಾದ, ಜೆಟ್ಟಪ್ಪ ಮರಡಿ, ನಿವೃತ್ತ ಮುಖ್ಯ ಶಿಕ್ಷಕ ಬಿ.ಎಸ್ ತಳವಾರ, ವಿನಾಯಕ ಗುಣಸಾಗರ, ಭೀಮಣ್ಣ ಉಪ್ಪಾರ, ಬುಡ್ಡಸಾಬ್ ಬಾಗವಾನ, ಶ್ರೀಶೈಲ ಗಿಣ್ಣಿ, ಬಸಲಿಂಗಪ್ಪ ಜಂಬಗಿ,ಸ್ವಾಮಯ್ಯ ಮಠಪತಿ, ಗ್ರಾಪ.ಮಾಜಿ ಅದ್ಯಕ್ಷ ಮಹಾದೆವಪ್ಪ ಹುಣಸಗಿ, ಭೀಮಣ್ಣ ಜೇವೂರ ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಮತ್ತು ಗ್ರಾಮದ ಮುಖಂಡರು ಅನೇಕರು ಉಪಸ್ಥಿತರಿದ್ದರು.