ಕುರಿ ಸಾಗಾಣಿಕೆ ಒಂದು ಕೋಟಿ ಸಾಲಕ್ಕೆ 50 ಲಕ್ಷ ಸಬ್ಸಿಡಿ – ಯಶವಂತರಾಯಗೌಡ
ಇಂಡಿ : ಸರಕಾರದ ಅನುದಾನ ಪಡೆದು ನಮ್ಮ ರೈತರು
ಅರ್ಥಿಕವಾಗಿ ಪ್ರಬಲಗೊಳ್ಳಬೇಕು. ಕುರಿ ಸಾಗಾಣಿಕೆಗೆ
ಎಲ್ಲಾ ಸಮುದಾಯದವರಿಗೂ ಬ್ಯಾಂಕಿನವರು ಒಂದು
ಕೋಟಿ ಸಾಲದಲ್ಲಿ ಶೇ 50 ರಿಯಾಯ್ತಿ ನೀಡುತ್ತಿದ್ದು
ಇಂತಹ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಅರ್ಥಿಕವಾಗಿ ಸಬಲರಾಗಲು ಇನ್ನೊಬ್ಬರಿಗೆ
ಮಾದರಿಯಾಗಲು ಶಾಸಕ ಯಶವಂತರಾಯಗೌಡ
ಪಾಟೀಲರು ಹೇಳಿದರು.
ತಾಲೂಕಿನ ಅಂಜುಟಗಿ ಗ್ರಾಮದ ರಾಯಪ್ಪ ಯಲ್ಲಪ್ಪ
ಹರಳಯ್ಯ ಇವರ ತೋಟದಲ್ಲಿ ಕುರಿ ಸಾಕಾಣಿಕೆ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದರು ಪಶು ವೈದ್ಯಾಧಿಕಾರಿ ಡಾ. ಬಿ.ಎಚ್.ಕನ್ನೂರ ಮಾತನಾಡಿ ಸರಕಾರದ ಅನುದಾನ ಪಡೆಯಲು ಈ ಯೋಜನೆಗೆ ಸುಮಾರು 6 ಎಕರೆ ಜಮೀನು ಹೊಂದಿರಬೇಕು. ಅಂರ್ತಜಾಲದಲ್ಲಿ ರಾಷ್ಟ್ರೀಯ ಜಾನುವಾರ ಮಿಷನ್ ಮೂಲಕ ಯೋಜನೆಗೆ ಬ್ಯಾಂಕುಗಳು ವಿತರಿಸುವವು. ಈ ಯೋಜನೆಯಲ್ಲಿ 500 ಹೆಣ್ಣು,25 ಗಂಡು ಆಡುಗಳನ್ನು ಸಾಕುವಷ್ಟು ಶೆಡ್ಡು
ನಿರ್ಮಾಣ ಮಾಡಬೇಕು. ತಳಿ ಸುಧಾರಣೆ ಮೂಲಕ
ಪ್ರತಿ ಪ್ರಾಣಿ ಉತ್ಪಾದನೆಯ ಹೆಚ್ಚಳ, ಮಾಂಸ, ಮೇಕೆ ಹಾಲು ಉಣ್ಣೆ ಮತ್ತು ಮೇವಿನ ಉತ್ಪಾದನೆ ಹೆಚ್ಚಳ ಈ ಯೋಜನೆಯ ಮುಖ್ಯಉದ್ದೇಶ ಎಂದರು.
ರೈತ ರಾಯಪ್ಪ ಹರಳಯ್ಯ ಮಾತನಾಡಿ ಇಂಡಿಯ
ಕೆನರಾ ಬ್ಯಾಂಕಿನಿಂದ 81 ಲಕ್ಷ ಸಾಲ ಪಡೆದಿದ್ದು 50
ಲಕ್ಷ ರೂ ದಲ್ಲಿ ಶೇಡ್ಡು ನಿರ್ಮಾಣ ಮಾಡಿದ್ದೇನೆ. ಇದಕ್ಕೆ ಸಬ್ಸಿಡಿ ಶೇ 50 ರಷ್ಠಿದೆ ಎಂದರು. ಪಶು ವೈದ್ಯಾಧಿಕಾರಿ ಡಾ. ಸುಧೀರ ನಾಯಕ, ನಾಡಕಚೇರಿಯ ಉಪತಹಸೀಲ್ದಾರ ಎ.ಎಸ್.ಗೊಟ್ಯಾಳ, ಸಣ್ಣಪ್ಪ ತಳವಾರ, ಶಬೀರ ಮುಲ್ಲಾ, ರಾಜಶೇಖರ ಕಾಂಬಳೆ, ರಾಯಗೊಂಡ ರಗಟೆ ಮತ್ತಿತರಿದ್ದರು.
ಇಂಡಿ ಸಾಸಕ ಯಶವಂತರಾಯಗೌಡ ಪಾಟೀಲರು
ಕುರಿ ಸಾಕಾಣಿಕೆ ಶೆಡ್ಡು ವೀಕ್ಷಿಸುತ್ತಿರುವದು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು
ಅಂಜುಟಗಿ ಗ್ರಾಮದಲ್ಲಿ ಕುರಿ ಸಾಗಾಣಿಕೆ ಕೇಂದ್ರ
ಉದ್ಘಾಟಿಸಿದರು.