ಸಿಡಿಲು ಬಡಿದು ಮೃತಪಟ್ಟ ಮಲ್ಲಪ್ಪ ಕುಟುಂಬಕ್ಕೆ 5 ಲಕ್ಷ ರೂ ಚೆಕ್ ಶಾಸಕ ನಾಡಗೌಡ ವಿತರಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಈಚೇಗೆ ಸಿಡಿಲು ಬಡಿದು ಮೃತಪಟ್ಟ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ ಅವರ ಕುಟುಂಬದಕ್ಕೆ ಕೆಎಸ್ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ( ಅಪ್ಪಾಜಿ) ಸರ್ಕಾರದಿಂದ ಮಂಜೂರಾದ 5 ಲಕ್ಷ ರೂ.ಪರಿಹಾರ ಧನದ ಚೆಕ್ನ್ನು ಸೋಮವಾರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಬಲರಾಮ ಕಟ್ಟಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ಗುತ್ತಿಗೆದಾರ ರಾಜುಗೌಡ ಕೊಂಗಿ,ಮಾಜಿ ತಾ ಪಂ ಸದಸ್ಯ ಶ್ರೀಶೈಲ ಮರೋಳ ಸೇರಿದಂತೆ ಉಪಸ್ಥಿತರಿದ್ದರು.