5 ಕಂಟ್ರಿ ಪಿಸ್ತೂಲ್ 6 ಸಜೀವ ಗುಂಡು ಜಪ್ತಿ..! ಎಸ್ಪಿ ಲಕ್ಷ್ಮಣ
ವಿಜಯಪುರ: ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಯೀಮ ಸಿರಾಜ್ ಶಾಮಣ್ಣವರ, ನಿಹಾಲ @ ನೇಹಾಲ್ ಮಹಿಬೂಬಸಾಬ ತಾಂಬೋಳಿ, ಸಿದ್ದು @ ಸಿದ್ಯಾ ಗುರುಪಾದ ಮೂಡಲಗಿ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಈ ರೀತಿ ಮೂರು ಜನ ಆರೋಪಿತರಿಂದ ಒಟ್ಟು 5 ಕಂಟ್ರಿ ಪಿಸ್ತೂಲ್ ಹಾಗೂ 6 ಸಜೀವ ಗುಂಡುಗಳನ್ನು ಜಪ್ತ ಮಾಡಿಕೊಳ್ಳಲಾಗಿದೆ. ಆರೋಪಿತರನ್ನು ದಸ್ತಗೀರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.