Voiceofjanata.in SPORTS NEWS
2025 : ಭಾರತ ಮುಡಿಗೆ ಐಸಿಸಿ ಚಾಂಪಿಯನ್ ಟ್ರೋಫಿ
ICC Champion Trophy 2025 ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ದಾಖಲೆಯ 3ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ದಾಖಲೆಯ 3ನೇ ಚಾಂಪಿಯನ್ಸ್ ಟ್ರೋಫಿ ಕಿರೀಟಕ್ಕೆ ಮುತ್ತಿಕ್ಕಿ ಸಂಭ್ರಮಿಸಿದೆ.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್ಗೆ 57 ರನ್ ಕಲೆ ಹಾಕಿದರು. ಈ ಜೋಡಿಯನ್ನು ವರುಣ್ ಚಕ್ರವರ್ತಿ ಮುರಿದರು. ಪರಿಣಾಮ ಯಂಗ್ 15ಕ್ಕೆ ಆಟ ಮುಗಿಸಿದರು.
ಆರಂಭದಲ್ಲಿ ಮೇಲುಗೈ ಸಾಧಿಸಿದ ಸ್ಪಿನ್ನರ್ಗಳು ಮಧ್ಯಮ ಓವರ್ಗಳಲ್ಲಿ ಕೊಂಚ ರನ್ ಲೀಕ್ ಮಾಡಿದರು. ಮಿಚೆಲ್ 101 ಎಸೆತಗಳಲ್ಲಿ 3 ಬೌಂಡರಿ 63 ರನ್ ಗಳಿಸಿದ್ದಾರೆ. ಮೈಕಲ್ ಬ್ರೇಸ್ವೆಲ್ 40 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ 53 ರನ್ ಗಳಿಸಿ ತಂಡದ ಗಡಿ 250ರ ಗಡಿ ದಾಟಿಸಿದರು. ಇವರ ಜೊತೆಗೆ ಗ್ಲೆನ್ ಫಿಲಿಪ್ಸ್ ಸಹ ಅಮೋಘ 34 ರನ್ಗಳ ಕಾಣಿಕೆ ನೀಡಿದರು.
ರೋಹಿತ್ ಶರ್ಮಾ ಅಬ್ಬರದ ಆರಂಭದ ನಡುವೆಯೂ ಭಾರತ ದಿಢೀರ್ ವಿಕೆಟ್ ಪತನ ಪಂದ್ಯದ ಗತಿ ಬದಲಿಸಿದ್ದು ಸುಳ್ಳಲ್ಲ. ಆದರೆ ಸತತ ಹೋರಾಟ ಟೀಂ ಇಂಡಿಯಾ ಕೈಹಿಡಿಯಿತು . ಆರಂಭದಲ್ಲಿ ರೋಹಿತ್, ಬಳಿಕ ಶ್ರೇಯಸ್ ಅಯ್ಯರ್, ಕೊನೆಯಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಗೆಲುವು ಖಚಿತಪಡಿಸಿದರು. ಭಾರತ 4 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಟ್ರೋಫಿ ಗೆದ್ದುಕೊಂಡಿದೆ. 2024ರಲ್ಲಿ ಐಸಿಸಿ ಟಿ20 ಟ್ರೋಫಿ ಗೆದ್ದಿದ್ದ ಭಾರತ ಇದೀಗ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ಸತತ 2 ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
ಸಂಕ್ಷಿಪ್ತ ಸ್ಕೋರ್
NZ – 251/7 (50 V) INDIA 254/6 (49)
ನ್ಯೂಜಿಲೆಂಡ್ 251/7, ಡೆರಿಲ್ ಮಿಚೆಲ್ 63, ಮಿಚೆಲ್ ಬ್ರೆಸ್ ವೆಲ್ 53, ರಚಿನ್ ರವೀಂದ್ರ 37, ಗ್ಲೆನ್ ಫಿಲಿಪ್ಸ್ 34, ಕುಲ್ದೀಪ್ 40ಕ್ಕೆ 2, ವರುಣ್ ಚಕ್ರವರ್ತಿ 45ಕ್ಕೆ 2
ಭಾರತ – ರೋಹಿತ್ ಶರ್ಮಾ 76, ಶ್ರೇಯಸ್ 48, ಕೆಎಲ್ ರಾಹುಲ್ 34, ಬ್ರೇಸ್ ವೆಲ್ 28ಕ್ಕೆ 2, ಸ್ಯಾಂಟ್ನರ್ 46ಕ್ಕೆ


















