ಮುದ್ದೇಬಿಹಾಳ :ತಾಲ್ಲೂಕಿನ ಚವನಭಾವಿ ಕ್ರಾಸ್ ಹತ್ತಿರ ಬರುವ ಶ್ರೀರೇವಣಸಿದ್ದೇಶ್ವರ ಪ್ರೌಢಶಾಲಯ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಉತ್ತಮ ಫಲಿತಾಂಶ ಬಂದಿದೆ.
2024 -25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಬಸವರಾಜ ರಮೇಶ ಬಿರಾದಾರ 625- 583 ಶೇ 93℅28,ರಷ್ಟು,ದ್ವಿತೀಯ ಸ್ಥಾನ ಲಕ್ಷ್ಮಿ ಹಣಮಂತ್ರಾಯ ಬಿರಾದಾರ, 625-555 ಶೇ 88℅80,ತೃತೀಯ ಸ್ಥಾನ
ರಷ್ಟು,ರಾಜೇಶ್ವರಿ ಚನ್ನಬಸಪ್ಪಗೌಡ ಪಾಟೀಲ 625-551 ಶೇ88℅16 ರಷ್ಟು ಪಡೆದುಕೊಂಡಿದ್ದಾರೆ.
ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ವಿನಯ ಎಂ ಪೂಜಾರಿ, ಕಾರ್ಯದರ್ಶಿ ಲಕ್ಷ್ಮಣ ಗುರಿಕಾರ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ನಿಂಗಣ್ಣ ಎಂ ಬಿರಾದಾರ, ಶಾಲೆಯ ಶಿಕ್ಷಕರು, ಮಕ್ಕಳು ಎಸ್ ಎಸ್ ಎಲ್ ಸಿ ಫಲಿತಾಂಶ ದ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.