ಕೇನಾಲ್ ನಲ್ಲಿ ಮೊಟಾರು ರಿಪೇರಿ ಮಾಡಲು ಹೋಗಿ ಇಬ್ಬರ ದಾರುಣ ಸಾವು..!
ಇಂಡಿ : ಕೆನಾಲ್‌ನಲ್ಲಿ ಮೋಟಾರ್ ರಿಪೇರಿ ಮಾಡುವ ವೇಳೆ ಓರ್ವನ ಕಾಲು ಜಾರಿ ಕೆನಾಲ್‌ನಲ್ಲಿ ಬಿದ್ದು ಹರಿದು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಇನ್ನು ಓರ್ವನ್ನು ಕಾಪಾಡಲು ಮತ್ತೋರ್ವ ಕೆನಾಲ್‌ಗೆ ಹಾರಿದ್ದಾನೆ. ಆದ್ರೇ, ಭೋಜರಾಜ್ ದಶವಂತ ಹಾಗೂ ರಾಜಕುಮಾರ ದಶವಂತ ಇಬ್ಬರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.